ಕಾರವಾರ: ಆಕಳ ಮೂತಿಗೆ ಸಿಲುಕಿದ ಪ್ಲಾಸ್ಟಿಕ್ ಡಬ್ಬಿ: ಯಾತನೆ ಅನುಭವಿಸುತ್ತಿರುವ ಆಕಳನ್ನು ಗುರುತಿಸಿ ಡಬ್ಬಿ ತೆಗೆದು ಮಾನವೀಯತೆ ಮೆರೆದ ಸ್ವಯಂಸೇವಕರು.

ಕಾರವಾರ, ನವೆಂಬರ್ 12: ಕಾರವಾರ ತಾಲೂಕಿನ ಶಿರವಾಡ ಗ್ರಾಮದಲ್ಲಿ ಬುಧವಾರ ರಾತ್ರಿ ಗೋಮಾತೆ( ಆಕಳು) ಬಾಯಿಯಲ್ಲಿ ಪೇಂಟ್ ಡಬ್ಬಿ ಸಿಕ್ಕಿ ತೊಂದರೆ ಅನುಭವಿಸುತ್ತಿತ್ತು.

ಇದನ್ನು ನೋಡಿ ವಿಪತ್ತು ನಿರ್ವಹಣಾ ತಂಡದ ಸದಸ್ಯರಾದ ಸತೀಶ್ ಬಾಂದೆಕರ್ ಹಾಗೂ ಸಂದೀಪ್ ನಾಯ್ಕ್  ಗೋಮಾತೆ ಸಮಿತಿಯ ಸದಸ್ಯರಾದ ಅನಮೊಲ ರೇವಣಕರ್ ಮತ್ತು ಸಂತೋಷ್ ಆಚಾರಿ ರವರ ಮತ್ತು ಊರ ನಾಗರಿಕರ ಸಹಕಾರದಿಂದ  ಗೋಮಾತೆಯ ಬಾಯಿಗೆ ಸಿಲುಕಿದ ಪೇಂಟ್  ಡಬ್ಬಿಯನ್ನು ಸುರಕ್ಷಿತವಾಗಿ ಹೊರತೆಗೆಯಲಾಯಿತು.

ವರದಿ:
ಸತೀಶ್ ಬಾಂದೆಕರ್
ಸ್ವಯಂಸೇವಕ
ವಿಪತ್ತು ನಿರ್ವಹಣಾ ಘಟಕ
ಕಾರವಾರ

Comments