ಕುಂದಾಪುರ:-ಹಾಲಾಡಿ ವಲಯದ ಬೆಳ್ವೆ ಘಟಕದ ಶೌರ್ಯ ಹಾಗೂ ವಿಪತ್ತು ದಳದ ಸ್ವಯಂಸೇವಕರ ಮಾಸಿಕ ಸಭೆ
ಡಿಸೇಂಬರ್31-12-2021ರಂದು ಸಂಜೆ 5.30 ಗಂಟೆಗೆ ಸರಿಯಾಗಿ ಬೆಳ್ವೆ ಗ್ರಾಮದ ಅಲ್ಬಾಡಿಯ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಸೇವಾ ಕೇಂದ್ರದಲ್ಲಿ ನೆಡೆಯಿತು. ಸಭೆಯಲ್ಲಿ ವಿಪತ್ತುಸೇವೆ,ಸಾಮಾಜಿಕ ಸೇವೆ, ವಯಕ್ತಿಕ ಸೇವೆಗಳು, ವಿಪತ್ತು ಘಟಕದ ಜವಾಬ್ದಾರಿ ಹಾಗೂ ಮುಂದಿನ ಕಾರ್ಯಗಳ ಬಗ್ಗೆ ಹೊಸದಾಗಿ ಸ್ವಯಂ ಸೇವಕರನ್ನು ಸೇರಿಸಿಕೊಳ್ಳುವಬಗ್ಗೆ, ಚರ್ಚಿಸಲಾಯಿತು, ಹಾಗೆ ಅರಣ್ಯಭಾಗದ ರಸ್ತೆ ಬದಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ವಸ್ತುಗಳನ್ನುಎಸೆಯುವ ಜನರ ಮನಸ್ಥಿತಿಯನ್ನು ಬದಲಾಯಿಸಿ ಗ್ರಾಮದ ಜನರನ್ನು ಒಗ್ಗೂಡಿಸಿಕೊಂಡು ಎರಡು ಗ್ರಾಮ ಪಂಚಾಯತಿಗೆ ಮನವಿಯನ್ನು ಸಲ್ಲಿಸಿ. ಗ್ರಾಮ ಪಂಚಾಯತ್ ಹಾಗೂ ಅರಣ್ಯ ಇಲಾಖೆಯವರ ಸಹಕಾರವನ್ನು ಪಡೆದು ಸ್ವಚ್ಚತೆಯನ್ನು ಮುಂದಿನ ವಾರದಲ್ಲಿ ಮಾಡಬೇಕು ಎಂದು ಸಭೆಯಲ್ಲಿ ಎಲ್ಲರ ಓಪ್ಪಿಗೆಯ ಮೇರೆಗೆ ನಿರ್ಣಯಿಸಲಾಯಿತು. ವಲಯದ ಮೇಲ್ವಿಚಾರಕರಾದ ಸಂತೋಷ ಸರ್ ಮಾರ್ಗದರ್ಶನದ ಮೆರೆಗೆ ಸ್ಥಳೀಯ ಸೇವಾಪ್ರತಿನಿಧಿ ಪ್ರಶಾಂತ್ ಸರ್, ಉಪಸ್ಥಿತಿ ಯಲ್ಲಿ ಸಂಯೋಜಕರಾದ ಹೇಮಂತ ಪೂಜಾರಿ ಹಾಗೂ ಸರ್ವ ಸದಸ್ಯರ ಉಪಸ್ಥಿತಿಯಲ್ಲಿ ಸಭೆ ನಡೆಸಲಾಯಿತು.
Comments
Post a Comment