ಭಟ್ಕಳ : ಹೆಬ್ಬಾವನ್ನು ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸುವಲ್ಲಿ ಯಶಸ್ವಿಯಾದ ಸ್ವಯಂ ಸೇವಕ


ಹೆಬಳೆ ಘಟಕ, ಸೇವೆ ಸಂಖ್ಯೆ 6, ಜನವರಿ 2
  
                 ರಾತ್ರಿ ಸುಮಾರು 1-00 ರ ಹೊತ್ತಿಗೆ ಗಾಂಧಿನಗರ ರಮೇಶ ನಾಯ್ಕರವರ ಮನೆಯಲ್ಲಿ ನಾಯಿ ಇದ್ದಕ್ಕಿದ್ದಂತೆ ಬೊಗಳಲಾರಾಂಭಿಸಿತು. ಮನೆಯವರೆಲ್ಲ ಎದ್ದು ನೋಡಿದಾಗ ಹೆಬ್ಬಾವು ಮನೆಯ ಬಳಿ ಕಾಣಿಸಿತು. ಆಗ ಸ್ವಯಂ ಸೇವಕ ರಮೇಶ ನಾಯ್ಕರವರು ಕಲಿಲ ಎನ್ನುವವರ ಸಹಾಯದೊಂದಿಗೆ ಬಹಳ ಜಾಗರೂಕತೆಯಿಂದ ಹೆಬ್ಬಾವನ್ನು ಹಿಡಿದಿರುತ್ತಾರೆ .

                  ನಂತರ ಅರಣ್ಯ ಇಲಾಖೆಗೆ ಹೋಗಿ ಹೆಬ್ಬಾವನ್ನು ಇಲಾಖೆಗೆ ಒಪ್ಪಿಸಿ ಮನೆಗೆ ಹಿಂದಿರುಗಿರುತ್ತಾರೆ. 

ವರದಿ
ಪುಷ್ಪಾ ನಾಯ್ಕ
ಸಂಯೋಜಕರು
ಹೆಬಳೆ ಘಟಕ

Comments