ಕುಂದಾಪುರ: ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿದ ಸ್ವಯಂಸೇವಕರು

ಹಾಲಾಡಿ ವಲಯದ ಬೆಳ್ವೆ ಘಟಕದ  ಶೌರ್ಯ  ವಿಪತ್ತು ನಿರ್ವಹಣಾ ದಳದ ಸ್ವಯಂಸೇವಕರು 09/01/2022ರಂದು ಅರಣ್ಯ ಪ್ರದೇಶ ದ ರಸ್ತೆ ಬದಿಯಲ್ಲಿ ಸ್ವಚ್ಛತೆ ಮಾಡಿದ್ದು.ನಂತರ ಮೂರು ದಿನಗಳ ಬಳಿಕ ಸ್ವಯಂ ಸೇವಕರು ಸ್ಥಳವನ್ನು ಪರಿಶೀಲನೆ ಮಾಡಿರುತ್ತಾರೆ. ಪರಿಶೀಲನೆ ನಡೆಸುವ ವೇಳೆ ಕೆಲವೊಂದು ಕಡೆ ಕಿಡಿಗೇಡಿಗಳು ಸ್ವಚ್ಛ ವಾಗಿರುವ ಪರಿಸರದ ಮೇಲೆ ಕಸವನ್ನು ಹಾಕಿ ಮತ್ತೆ ಪರಿಸರ ಮಲಿನ ಮಾಡಿರುತ್ತಾರೆ. ಇದನ್ನು ಕಂಡು ಮನ ನೊಂದ ಸ್ವಯಂ ಸೇವಕರು ಕೂಡಲೆ
 ವಲಯ ಅರಣ್ಯಧಿಕಾರಿ (ವನ್ಯಜೀವಿ )ಹೆಬ್ರಿ ವಲಯದ ಅಧಿಕಾರಿಯವರಾದ
 "ಗೌರವ ಎಸ್. ಎಂ RFO ಸರ್ ಗೆ ಮನವಿ ನೀಡಲಾಯಿತು. ಮನವಿ ಸ್ವೀಕರಿಸಿದ ಅವರು ತಕ್ಷಣ ಪ್ರತಿಕ್ರಿಯೆ ನೀಡಿದ್ದು. ಕೂಡಲೆ ಕಸ ಮತ್ತು ಮಧ್ಯದ ಬಾಟಲಿಗಳನ್ನು ಅರಣ್ಯ ಪ್ರದೇಶ ದ ರಸ್ತೆ ಬದಿಯಲ್ಲಿ ಎಸೆದವರ ವಿರುದ್ಧ ಕಾನೂನು ಕ್ರಮ ಕೈ ಗೊಳ್ಳುತ್ತೇವೆ. ಮತ್ತು ಅವರಿಗೆ ದಂಡ ವಿದಿಸುತ್ತೇವೆ ಎಂದು ಭರವಸೆ ನೀಡಿರುತ್ತಾರೆ. ಹಾಗೂ ಕೂಡಲೆ ರಸ್ತೆ ಬದಿಗೆ ಸ್ವಚ್ಛತೆಯ ಬಗ್ಗೆ ನಾಮ ಫಲಕ  ಹಾಕುವುದಾಗಿ ತಿಳಿಸಿರುತ್ತಾರೆ. ನಾವು ಮಾಡಿರುವ ಸಮಾಜ ಸೇವೆಯ ಬಗ್ಗೆ ಅರಣ್ಯಧಿಕಾರಿಯವರು ಮೆಚ್ಚುಗೆ ವ್ಯಕ್ತ ಪಡಿಸಿರುತ್ತಾರೆ.🙏

Comments