ಭಟ್ಕಳ ; ಮರಣ ಹೊಂದಿದ ಜಾನುವಾರವನ್ನು ದಫನ ಮಾಡಿದ ಸ್ವಯಂ ಸೇವಕರು.


 ಭಟ್ಕಳ: ಬೆಂಗ್ರೆ ಘಟಕ, ಡಿಸೆಂಬರ್ 28,ಸೇವೆ ಸಂಖ್ಯೆ 2
ಮೊನ್ನೆ ರಾತ್ರಿ ಸುಮಾರು 9ಗಂಟೆಗೆ ಪಡು ಶಿರಾಲಿ ಯ ಮಾದೇವಿ ನಾಯ್ಕ ಇವರ ಮನೆಯ ಆಕಳು ಆರಾಮ ಇಲ್ಲದೆ, ಮೈ್ಯೆಲ್ಲಾ ಹುನ್ನುಆಗಿ  ಸತ್ತು ಹೋಗಿತ್ತು. ಮನೆಯಲ್ಲಿ ಯಾರೂ ಇರಲಿಲ್ಲ. 2ಚಿಕ್ಕ ಮಕ್ಕಳು ಮಾತ್ರ ಇದ್ದರು. ತಕ್ಷಣ ಮಾದೇವಿ ನಾಯ್ಕ್ ಇವರು ನಮ್ಮ ಶೌರ್ಯ ಸ್ವಯಂ ಸೇವಕ ರಾದ ರವೀಂದ್ರ ನಾಯ್ಕ್ ಇವರ ಮನೆಗೆ ಬಂದು ಆಕಳನ್ನು ಧಫನ ಮಾಡುವುದಾಗಿ ಕೇಳಿದಾಗ,  ರವೀಂದ್ರ ನಾಯ್ಕ ಹಾಗೂ ಭಾಸ್ಕರ ನಾಯ್ಕ್ ಇವರು  ಕೂಡಲೇ ಅವರ ಮನೆಗೆ ಹೋಗಿ ಆಕಳನ್ನು ಮಣ್ಣು ಮಾಡಿ  ಬಂದಿರುತ್ತಾರೆ.  ಕಲ್ಲಿನ ಜಾಗ ಆಗಿರುದರಿಂದ ಸುಮಾರು 2ತಾಸು  ಶ್ರಮದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ. ಮಾದೇವಿ ನಾಯ್ಕ್ ಇವರು ಕೃತಜ್ಞತೆ ಸಲ್ಲಿಸಿರುತ್ತಾರೆ.
(ಅಲ್ಲಿ ಪೋಟೋ ತೆಗೆದಿದ್ದು ಮಕ್ಕಳು delete ಮಾಡಿದ್ದಾರೆ)
ವರದಿ
ಜ್ಯೋತಿ ಆಚಾರಿ 
ಬೆಂಗ್ರೆ ಘಟಕ

Comments