ಕುಂದಾಪುರ: ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ ಸ್ವಚ್ಚತಾ ಶ್ರಮದಾನ


ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ 
ಬಿ. ಸಿ. ಟ್ರಸ್ಟ್ ( ರಿ.) ಹಾಲಾಡಿ ವಲಯ.. ಶೌರ್ಯ ವಿಪತ್ತು ನಿರ್ವಹಣಾ ಘಟಕ ಬೆಳ್ವೆ... ಪರಮಪೂಜ್ಯ 
ಡಾ|| ಡಿ. ವೀರೇಂದ್ರ ಹೆಗ್ಗಡೆ ಹಾಗೂ ಮಾತೃಶ್ರೀ ಹೇಮಾವತಿ ಡಿ. ಹೆಗ್ಗಡೆಯವರ ಕೃಪಾಶಿರ್ವಾದದೊಂದಿಗೆ.. ಗ್ರಾಮ ಪಂಚಾಯತ್ ಬೆಳ್ವೆ ಮತ್ತು ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಅರಣ್ಯ ಸ್ವಚ್ಛತಾ ಅಭಿಯಾನ ಕಾರ್ಯಕ್ರಮವು ಇಂದು ಯಶಸ್ವಿಯಾಗಿ ನೆರವೇರಿಸಲಾಯಿತು...
ಪೂರ್ವಾಹ್ನ  9 ಗಂಟೆಗೆ ಸರಿಯಾಗಿ ಮುಕಾಂಬಿಕಾ ಕಲ್ಯಾಣಧಾಮ ಹೊನ್ಕಲ್ ಇಲ್ಲಿಂದ ಹಾಲಾಡಿ ವಲಯದ ಮೇಲ್ವಿಚಾರಕರಾದ ಸಂತೋಷ   ನಾಯ್ಕ  ಬೆಳ್ವೆ ವಲಯದ ನೂತನ ಮೇಲ್ವಿಚಾರಕರಾದ ಸಂತೋಷ ಹಾಗೂ ಅಲ್ಬಾಡಿ ಒಕ್ಕೂಟದ ಸೇವಾಪ್ರತಿನಿಧಿಯಾದ ಪ್ರಶಾಂತ ಇವರ ಮಾರ್ಗದರ್ಶನದೊಂದಿಗೆ ಶೌರ್ಯ ವಿಪತ್ತು ಘಟಕದ ಸರ್ವಸದಸ್ಯರನ್ನು ಒಳಗೊಂಡು  ಹೆಬ್ರಿ ದೂಪದಕಟ್ಟೆಯಿಂದ ತೆಂಕಹೊಲ ಅರಣ್ಯ ಮಾರ್ಗವಾಗಿ ಅಲ್ಬಾಡಿ ವೃತ್ತದವರೆಗೆ ಸತತವಾಗಿ 6km ವ್ಯಾಪ್ತಿಯಲ್ಲಿ 7 ಗಂಟೆಗಳ ಕಾಲ ಶ್ರಮವಿನಿಮಯ ಮಾಡಲಾಯಿತು .. 
 ಸ್ವಚ್ಛತಾ ಕಾರ್ಯಕ್ರಮದಲ್ಲಿ  ರಾಜ್ಯ ಹೆದ್ದಾರಿಯ ಇಕ್ಕೆಲದ  ಪರಿಸರದಲ್ಲಿದ್ದ ತ್ಯಾಜ್ಯಗಳು, ಕುಡಿದು ಬಿಸಾಡಿದ ಮಧ್ಯದ ಬಾಟಲಿಗಳು ಹಾಗೂ ಇನ್ನಿತರ ಪ್ಲಾಸ್ಟಿಕ್ ತ್ಯಾಜ್ಯಗಳು ಸೇರಿದಂತೆ ಸುಮಾರು 8 ಲೋಡ್ ತ್ಯಾಜ್ಯಗಳನ್ನು ಸಂಗ್ರಹಿಸಿ ಕಸ ವಿಲೇವಾರಿ ಘಟಕ ಬೆಳ್ವೆ ಇವರಿಗೆ ಹಸ್ತಾಂತರಿಸಲಾಯಿತು  
ಬೆಳಿಗ್ಗೆ ಘಟಕದ ಸದಸ್ಯರು ಸಂಚರಿಸಲು ವಾಹನ ವ್ಯವಸ್ಥೆ ಮಾಡಿರುವ ಕೃಷ್ಣ ನಾಯ್ಕ...  ಉಪಹಾರದ  ವ್ಯವಸ್ಥೆ ಮಾಡಿದ  ಅರಣ್ಯ ಇಲಾಖೆಯ ಅಧಿಕಾರಿಯವರಿಗೂ... ಮಧ್ಯಾಹ್ನ ಊಟ ಹಾಗೂ 
ಚಾ .ತಿಂಡಿ ವ್ಯವಸ್ಥೆ ಮಾಡಿದ ವಿಜಯ್ ಕುಮಾರ್ ಶೆಟ್ಟಿ ಗೋಳಿಯಂಗಡಿ... ಘನ ತ್ಯಾಜ್ಯ ವಿಲೇವಾರಿ ಮಾಡಲು ವಾಹನದ ವ್ಯವಸ್ಥೆ ಮಾಡಿರುವ ಗ್ರಾಮ ಪಂಚಾಯತ್ ಅಧ್ಯಕ್ಷರು ಪಂ. ಅ. ಅಧಿಕಾರಿಯವರು ಹಾಗೂ ಆಡಳಿತ ಮಂಡಳಿಯವರು ಸಂಪೂರ್ಣ ಸಹಕಾರ ನೀಡಿರುತ್ತಾರೆ...

Comments