ಭಟ್ಕಳ : ಹಿಂದೂರುದ್ರಭೂಮಿಯ ಸ್ವಚ್ಛತೆಯಲ್ಲಿ ಪಾಲ್ಗೊಂಡ ಶೌರ್ಯ ಸ್ವಯಂಸೇವಕರು.
ಭಟ್ಕಳ,ಸೇವೆಸಂಖ್ಯೆ3,ಜನವರಿ7 :ಭಟ್ಕಳದ ಕರಿಕಲ್ ನಲ್ಲಿರುವ ಹಿಂದೂ ರುದ್ರಭೂಮಿಯನ್ನು ಸ್ವಚ್ಛಗೊಳಿಸುವ ಮಹತ್ ಕಾರ್ಯದಲ್ಲಿ ನಮ್ಮ ಸ್ವಯಂಸೇವಕ ರು ಶೌರ್ಯ ವನ್ನು ಮೆರೆದಿದ್ದಾರೆ.
ರುದ್ರಭೂಮಿಯಲ್ಲಿ ಬೆಳೆದಿರುವ ಗಿಡಗಳನ್ನು, ಮುಳ್ಳುಕಂಟಿ ಗಳನ್ನುಕಡಿದು ಸ್ವಚ್ಛಗೊಳಿಸಿದರು. ಅಲ್ಲಿ ಬಿದ್ದಿರುವ ಪ್ಲಾಸ್ಟಿಕ್ ಗಳನ್ನು,ಕಸಗಳನ್ನು ಒಂದೆಡೆ ಹಾಕಲಾಯಿತು.
ರುದ್ರಭೂಮಿಯ ಪರಿಸರವನ್ನು ಸುಂದರವಾಗಿ ಇಡುವಲ್ಲಿ ಅವರ ಸೇವಾ ಕಾರ್ಯ ಮೆಚ್ಚುವಂತದ್ದಾಗಿದೆ. ಈ ಒಂದು ಕಾರ್ಯದಲ್ಲಿಸ್ವಯಂಸೇವಕರಾದ ರಾಧಾ ಮೊಗೇರ್, ರಮೇಶ್ ಖಾರ್ವಿ, ಪುರಂದರ್ ಖಾರ್ವಿ, ವಿಶ್ವನಾಥ್ ಖಾರ್ವಿ ಯವರು ಹಾಗೂ ಊರಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.
ವರದಿ:
ರಾಧಾ ಮೊಗೇರ್
ಸಂಯೋಜಕರು
ಭಟ್ಕಳ ಘಟಕ.
Comments
Post a Comment