ಕುಂದಾಪುರ :-ಕೋಳಿ ಗೂಡಿಗೆ ನುಗ್ಗಿದ ನಾಗರಹಾವು; ಹಿಡಿದು ಕಾಡಿಗೆ ಬಿಟ್ಟು ಒಂದ ಸ್ವಯಂಸೇವಕ
ಡಿಸೇಂಬರ್ :-31/12/2021ರಂದು ಸಂಜೆ 06.20ಕ್ಕೆ ಹಾಲಾಡಿ ವಲಯದ ಬೆಳ್ವೆ ಘಟಕದ ಮರೂರು ಗ್ರಾಮದ ಜಯ ಪೂಜಾರಿಯವರ ನಿವಾಸದಲ್ಲಿ ಕೋಳಿ ಗೂಡಿಗೆ ನುಗ್ಗಿದ ನಾಗರಹಾವು ಕೋಳಿಯನ್ನು ಕೊಂದಿತು. ಅದನ್ನು ಕಂಡ ಮನೆಯವರು ಭಯ ಗೊಂಡು
ತಕ್ಷಣ ನಮ್ಮ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಉರಗ ಪ್ರೇಮಿ ಸ್ವಯಂಸೇವಕರಾದ ನಾಗರಾಜ್ ರವರಿಗೆ ಕರೆ ಮಾಡಿ ಹಾವು ಇರುವ ವಿಷಯವನ್ನು ತಿಳಿಸಿದರು.ಮಾಸಿಕ ಸಭೆಯಲ್ಲಿ ಚರ್ಚಿಸುತ್ತಿದ್ದ ನಮ್ಮ ಸ್ವಯಂ ಸೇವಕರಾದ ನಾಗರಾಜ ಮತ್ತು ಗಣೇಶ ತಕ್ಷಣ ಕರೆಯನ್ನು ಸ್ವೀಕರಿಸಿ ಸ್ಥಳಕ್ಕೆ ಆಗಮಿಸಿರುತ್ತಾರೆ.ಮನೆಯ ಹತ್ತಿರ ಪಾಳು ಬಿದ್ದ ಬಾವಿಯಲ್ಲಿ ಅಡಗಿ ಕೂತ ನಾಗರ ಹಾವನ್ನು ಮೇಲಕ್ಕೆತ್ತಿ ಸುರಕ್ಷಿತವಾಗಿ ಅರಣ್ಯಪ್ರದೇಶದಲ್ಲಿದಲ್ಲಿ ಬಿಟ್ಟು ಬಂದಿರುತ್ತಾರೆ.
ಇವರ ಈ ಸೇವಾಕಾರ್ಯಕ್ಕೆ ಮನೆಯವರಿಂದ ಮೆಚ್ಚುಗೆ ವ್ಯಕ್ತವಾಗಿರುತ್ತದೆ.
ವರದಿ :-
ಹೇಮಂತ ಪೂಜಾರಿ
ವಿಪತ್ತು ನಿರ್ವಹಣಾ ಘಟಕದ ಸಂಯೋಜಕರು ಹಾಲಾಡಿ ಬೆಳ್ವೆ.
Comments
Post a Comment