ಭಟ್ಕಳ:- ಉರಗ ಕಾರ್ಯಾಚರಣೆಯಲ್ಲಿ ತನ್ನನ್ನು ತೊಡಗಿಸಿಕೊಂಡ ಸ್ವಯಂಸೇವಕರು



ಮಂಕಿ ಘಟಕ, ಸೇವೆ ಸಂಖ್ಯೆ, 03 ಜನೇವರಿ.04/01/2022
             ಇಂದು ದಿನಾಂಕ04/01/2022ರಂದು ಮಂಕಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಕುಂಬಾರಕೆರೆಯಲ್ಲಿರುವ ಬಂಕೇಶ್ವರ ಅಯ್ಯಪ್ಪ ಸನ್ನಿಧಾನದಲ್ಲಿ ನಾಗರ ಹಾವೊಂದು ಕಾಣಿಸಿಕೊಂಡಿದ್ದು ತಕ್ಷಣ ಬಂಕೇಶ್ವರ ಸನ್ನಿಧಾನದಲ್ಲಿ ಅಯ್ಯಪ್ಪ ಮಾಲೆಯನ್ನು ಧರಿಸಿರುವಂತಹ ನಮ್ಮ ಶೌರ್ಯ ತಂಡದ ಸ್ವಯಂ ಸೇವಕರಾದ ಮಂಜುನಾಥ ಮುನ್ನ ಹಸ್ಲರ್  ಮಂಕಿ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರಾದ ಉದಯ ಗೋವಿಂದ ನಾಯ್ಕ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದಾಗ ಅಯ್ಯಪ್ಪ ಮಾಲೆ ಧರಿಸಿರುವ ಇವರು ತಕ್ಷಣ ಸ್ಥಳಕ್ಕೆ ಧಾವಿಸಿ ಉರಗ ಕಾರ್ಯಾಚರಣೆಯನ್ನು ಮಾಡಿ ಕಾಡಿಗೆ ಬಿಟ್ಟು ಅಯ್ಯಪ್ಪ ಸ್ವಾಮಿಯ ಕೃಪೆಗೆ ಪಾತ್ರರಾಗಿದ್ದಾರೆ.
ವರದಿ.
ಅಮಿತಾ ನಾಯ್ಕ.(ಸಂಯೋಜಕಿ)
ಮಂಕಿ ಘಟಕ. 

Comments