ಕುಂದಾಪುರ ತಾಲೂಕು:- ಅಂಪಾರು ಶೌರ್ಯ ವಿಪತ್ತು ಘಟಕದ ಸಾಮಾನ್ಯ ಸಭೆ.

ದಿನಾಂಕ:- 2/1/2022 ರಂದು 2.30ಕ್ಕೆ ಸರಿಯಾಗಿ ಸಾಮಾನ್ಯ ಸಭೆಯು ಅಂಪಾರು  ಧರ್ಮಸ್ಥಳ ವಲಯ ಕಛೇರಿಯಲ್ಲಿ ನಡೆಯಿತು. ಸಭೆಯಲ್ಲಿ ಶೌರ್ಯವಿಪತ್ತು ತಂಡಕ್ಕೆ  ಹೊಸ ಸದಸ್ಯರ ಸೇರ್ಪಡೆ ಮತ್ತು ವಿಪತ್ತು ಸೇವೆ ಬಗ್ಗೆ ಮಾಹಿತಿ ಹಾಗೂ ಉಡುಪಿಯಲ್ಲಿ ನಡೆಯುವ ಪರ್ಯಾಯ ಉತ್ಸವಕ್ಕೆ ಹೊರೆಕಾಣಿಕೆ ಸಂಗ್ರಹಿಸುವ ಬಗ್ಗೆ ಮಾಹಿತಿ, ಹಾಗೆ ದೇವಾಸ್ಥಾನದ ಸ್ವಚ್ಚತೆ, ಸಾಮಾಜಿಕ ಸೇವೆ, ವೈಯಕ್ತಿಕ ಸೇವೆ ತಿಂಗಳ ವಿಪತ್ತು ಘಟಕದ ಮಾಸಿಕ ಸಭೆ ಬಗ್ಗೆ ಚರ್ಚಿಸಲಾಯಿತು, ಗ್ರಾಮ ಪಂಚಾಯಿತಿಗೆ ಮುಂದಿನ ದಿನ ಸದಸ್ಯರ ಪರಿಚಯ ಮಾಡಿಕೊಳ್ಳುವುದರ ಬಗ್ಗೆ ಸಭೆಯಲ್ಲಿ ನಿರ್ಣಯಿಸಲಾಯಿತು. ವಲಯದ ಮೇಲ್ವಿಚಾರಕರಾದ ಮಲಾತಿ ಮೇಡಂರವರಿಂದ ಮಾಹಿತಿ ಸಭೆಯಲ್ಲಿ ಅಂಪಾರು ವಲಯದ ಎಲ್ಲಾ ಸೇವಾ ಪ್ರತಿನಿಧಿಗಳು ಮತ್ತು ಒಕ್ಕೂಟದ ಪದಾಧಿಕಾರಿಗಳ ಉಪಾಸ್ಥಿತಿಯಲ್ಲಿ ಸಭೆ ನಡೆಸಲಾಯಿತು. 
ವರದಿ:- ಉಮೇಶ್. ಬಿ.ಎಮ್. ಸಂಯೋಜಕರು ಅಂಪಾರು.

Comments