ಭಟ್ಕಳ : ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಿಯಲ್ಲಿ ಸ್ವಚ್ಛತೆಗೆ ಶ್ರಮದಾನ ಮಾಡಿದ ಸ್ವಯಂ ಸೇವಕರು


ಹೆಬಳೆ ಘಟಕ, ಸೇವೆ ಸಂಖ್ಯೆ 5, ಜನವರಿ 1
  
                 ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಿ ದೇವಿನಗರದಲ್ಲಿ ನಾಳೆ ಅನ್ನಸಂತರ್ಪಣೆ ಇರುವ ಕಾರಣ ಇಂದು ಹೆಬಳೆ ಶೌರ್ಯ ತಂಡ ಮೇಲ್ವಿಚಾರಕರ ಪ್ರೇರಣೆಯೊಂದಿಗೆ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. 
               
                ಭಜನಾ ಮಂದಿರದ ಸುತ್ತಲೂ ಬಿದ್ದಿರುವ ಪ್ಲಾಸ್ಟಿಕ್ ಹಾಗೂ ಕಸ ಕಡ್ಡಿಗಳನ್ನು ಒಂದೆಡೆ ಹಾಕಿ ಸುಟ್ಟು ಹಾಕಲಾಯಿತು. ಮರಳನ್ನು  ಬೇರೆಡೆ ಹಾಕಿ ಸುತ್ತಲೂ ಕಲ್ಲು ಕೂಡಿಡಲಾಯಿತು.  ಗೊಜ್ಜು ಮರಳನ್ನು ಸನ್ನಿಧಿಯ ಗೋಡೆಯ ಸುತ್ತ ಹಾಕಲಾಯಿತು. ಇಡೀ ಭಜನಾ ಮಂದಿರ ಸುಂದರಗಾಣಿಸುವಲ್ಲಿ ಇಂದು ಸ್ವಯಂ ಸೇವಕರು ಬೆಳಿಗ್ಗೆ 6-30ರಿಂದ 8-00 ಗಂಟೆಯ ತನಕ  ಶ್ರಮದಾನ ಮಾಡಿರುತ್ತಾರೆ. ಸ್ವಯಂ ಸೇವಕರ ಸೇವಾ ಮನೋಭಾವನೆಗೆ ಶ್ರೀ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಮೆಚ್ಚುಗೆ ಸೂಚಿಸಿರುತ್ತಾರೆ. 
                  ಈ ಶ್ರಮದಾನದಲ್ಲಿ ಪುಷ್ಪಾ ನಾಯ್ಕ, ಮಂಜುನಾಥ ನಾಯ್ಕ, ದೇವರಾಜ ಮೊಗೇರ, ಸುರೇಶ ನಾಯ್ಕ ಹಾಗೂ ಕುಪ್ಪಯ್ಯ ನಾಯ್ಕ ಪಾಲ್ಗೊಂಡಿರುತ್ತಾರೆ.

ವರದಿ
ಪುಷ್ಪಾ ನಾಯ್ಕ
ಸಂಯೋಜಕರು
ಹೆಬಳೆ ಘಟಕ

Comments