ಕುಂದಾಪುರ: ಅರಣ್ಯ ಇಲಾಖೆ ಭೇಟಿ ಮಾಡಿದ ಸ್ವಯಂಸೇವಕರು

ಬೆಳ್ವೆ ಮುಖ್ಯ ರಸ್ತೆಯಿಂದ ಹೆಬ್ರಿ ಹೋಗುವ ಅರಣ್ಯ ಮಾರ್ಗದಲ್ಲಿ ಪ್ಲಾಸ್ಟಿಕ್ ಬಾಟಲ್ಗಳು...ಕವರ್ ಗಳು... ಬಿಯರ್ ಬಾಟಲ್ ಗಳು... ಇನ್ನಿತ್ಯಾದಿ ತ್ಯಾಜ್ಯವನ್ನು ಎಸೆದು ಹಾನಿ ಮಾಡಿರುತ್ತಾರೆ... ಇದನ್ನರಿತ ನಮ್ಮ ಶೌರ್ಯ ಮತ್ತು ವಿಪತ್ತು ನಿರ್ವಹಣಾ ಘಟಕ ಬೆಳ್ವೆ ಹಾಲಾಡಿ ವಲಯ... ದಿನಾಂಕ 09.01.2022 ಭಾನುವಾರ " ಸ್ವಚ್ಛ ಅರಣ್ಯ ಅಭಿಯಾನ " ವನ್ನು ಆಯೋಜಿಸಿದ್ದು.. ಸದ್ರಿ ಸ್ವಚ್ಛತಾ ಅಭಿಯಾನಕ್ಕೆ ಸ್ಥಳೀಯ ಗ್ರಾಮ ಪಂಚಾಯತ್ ಬೆಳ್ವೆ ಇಲ್ಲಿನ ಅಭಿವೃದ್ಧಿ ಅಧಿಕಾರಿಗಳು ಹಾಗೂ ಅಧ್ಯಕ್ಷರನ್ನು ಭೇಟಿ ಮಾಡಿ ಅನುಮತಿ ಪಡೆಯಲಾಯಿತು... ಹಾಗೂ ಸ್ವಚ್ಛತಾ ಅಭಿಯಾನಕ್ಕೆ ಪಂಚಾಯತ್ ನ ಘನ ಮತ್ತು ದ್ರವ ತ್ಯಾಜ್ಯ ವಿಲೇವಾರಿ ವಾಹನವನ್ನು  ನೀಡುವುದರೊಂದಿಗೆ... ಹಾಗೂ ಮುಂದಿನ ದಿನಗಳಲ್ಲಿ ನಮ್ಮೆಲ್ಲ ಜನಪರ ಕಾರ್ಯಗಳಲ್ಲಿ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು

Comments