ಬೆಳ್ತಂಗಡಿ: ಗಿಡ ನಾಟಿ ಕಾರ್ಯಕ್ರಮ ನಡೆಸಿದ ಬೆಳ್ತಂಗಡಿ ಘಟಕದ ಶೌರ್ಯ ತಂಡ.
ಜೂನ್ 26: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ತಂಡದಿಂದ ಗಿಡ ನಾಟಿ ಹಾಗೂ ಸ್ವಚ್ಚತಾ ಶ್ರಮದಾನ ನಡೆಸಲಾಯಿತು.
ಮಾದರಿ ಹಿರಿಯ ಪ್ರಾರ್ಥಮಿಕ ಶಾಲೆ ಬೆಟ್ಟದಡಿ ಇಲ್ಲಿ ಗಿಡ ನಾಟಿ ಹಾಗೂ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಗಿದ್ದು ಶಾಲೆಯ ಆವರಣದಲ್ಲಿ ಗಿಡ ನಾಟಿ ಮಾಡಿ ಹುಲ್ಲು ಗಿಡಗಳನ್ನು ತೆಗೆದು ಸುತ್ತಮುತ್ತ ಸ್ವಚ್ಛ ಗೊಳಿಸಲಾಯಿತು.
ಈ ಸಂದರ್ಭದಲ್ಲಿ ವಿಪತ್ತು ನಿರ್ವಹಣೆಯ ಸ್ವಯಂಸೇವಕರಾದ ವಲಯ ಒಕ್ಕೂಟದ ಅಧ್ಯಕ್ಷರಾದ ಸೀತಾರಾಮ್ ಆರ್, ಜನಾರ್ಧನ ಗೌಡ, ಯಾದವ ಗೌಡ, ರೂಪೇಶ್, ಸೀತ, ರತನ್ ಕುಮಾರ್ ನಾ ಬಿನ್, ದಯಾನಂದ ಕೋಟ್ಯಾನ್, ಯೋಗೇಶ್, ಕುಸುಮ, ರಮೇಶ, ಅಣ್ಣು ಮೊಗೇರ, ಶ್ರೀಧರ ಕರ್ಕೇರ, ರವಿ ಪೂಜಾರಿ, ರಾಜೇಶ್, ಮಮತಾ, ಸುನಂದಾ, ಸಂತೋಷ್ ಕುಮಾರ್ ಮತ್ತು ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಪಾಧ್ಯಾರಾದ ಸುರೇಶ್ ಇವರು ವಿಪತ್ತು ತಂಡಕ್ಕೆ ಕಿರು ಕಾಣಿಕೆ ನೀಡಿದರು.
ಸಂಯೋಜಕಿ ವಿನೋದಾ ಹಾಗೂ ಘಟಕದ ಪ್ರತಿನಿಧಿ ಚರಣ್ ಶ್ರಮದಾನದಲ್ಲಿ ಪಾಲ್ಗೊಂಡಿದ್ದರು. ಚರಣ್ ರವರು ನಾಟಿಗೆ ಅಗತ್ಯ ಗಿಡಗಳನ್ನು ಪೂರೈಕೆ ಮಾಡಿದರು.
ವಲಯದ ಮೇಲ್ವಿಚಾರಕರಾದ ಹರೀಶ್ ರವರು ನೀಡಿದ ಮಾರ್ಗದರ್ಶನದಲ್ಲಿ ಶ್ರಮದಾನ ನಡೆಸಲಾಯಿತು. ಸ್ವಯಂಸೇವಕರು ನಿರ್ವಹಿಸಿದ ಶ್ರಮದಾನಕ್ಕೆ ಶಾಲೆಯ ಆಡಳಿತ ಮಂಡಳಿ ಕೃತಜ್ಞತೆ ಸಲ್ಲಿಸಿದೆ.
ವರದಿ:
ವಿನೋದಾ
ಸಂಯೋಜಕರು
ಬೆಳ್ತಂಗಡಿ ಘಟಕ
Comments
Post a Comment