ಕುಮಟಾ: ಮನೆ ರಿಪೇರಿ ಮಾಡಿಕೊಟ್ಟ ಕೊಡ್ಲಗದ್ದೆ ಘಟಕದ ಸ್ವಯಂಸೇವಕರು.


ಜೂನ್ 23: ಊರಿನ ಸದಸ್ಯರು ಬೀರಪ್ಪ ಪಟಗಾರ ಇವರಿಗೆ ಕೆಲವು ದಿನದಿಂದ ಅನಾರೋಗ್ಯ ವಾಗಿದರಿಂದ ಮಳೆಗಾಲ ಪ್ರಾರಂಭ ವಾಗಿದೆ, ಮನೆಯ ಮೇಲಚಾವಣಿ ಹಾಳಾಗಿದೆ,ಮಳೆ ಬಂದರೆ ಮಳೆ ನೀರು ಮನೆಯ ಒಳಗಡೆ ಎಂದು ಬೇಸರ ಮಾಡಿಕೊಳ್ಳುವಾಗ ನೆನಪಾಗಿದ್ದು ನಮ್ಮ ಕೊಡ್ಲಾಗದ್ದೆ ಘಟಕದ ಸ್ವಯಂ ಸೇವಕರಾದ ವಿಶ್ವನಾಥ್, ದೇವಿದಾಸ್ ಇವರಿಗೆ ವಿಷಯ ತಿಳಿಸಿದರು, ಹಾಗೆ ಇವತ್ತು ಅವರ ಮನೆಗೆ ಹೋಗಿ ನೋಡಿದಾಗ, ಹಾಗೆ ಅಡಿಕೆ ರಿಪು ತರಲಿಕ್ಕೆ ಬೇರೆಯವರ ತೋಟಕ್ಕೆ ಹೋಗಿಅವರ ಒಪ್ಪಿಗೆ ಪಡೆದು ಅಡಿಕೆ ಮರ ತಂದು ರಿಪು ಮಾಡಿ ಹಾಳಾಗಿದ್ದ ರಿಪು ಬದಲಾವಣೆ ಮಾಡಿ ಮನೆಯ ಮೇಲೆ ಎಲೆ ಗಳು ಸ್ವಚ್ಛತೆ ಮಾಡಿ, ರಿಪು ಹೊಡೆದು ಮಳೆಗಾಲದಲ್ಲಿ ಮಳೆಯ ನೀರು ಒಳಗಡೆ ಬರದೇ ಹಾಗೆ ಮಾಡಿ  ಅನಾರೋಗ್ಯ ದಿಂದ ಇದ್ದ ಬೀರಪ್ಪ ಇವರನ್ನು ಸ್ವಲ್ಪ ಹೊತ್ತು ಹಿಡಿದು ಕೊಂಡು ಓಡಾಡಿಸಿದ್ದು ಇರುತ್ತದೆ.ಸ್ವಯಂಸೇವಕರಾದ ಮುಕುಂದ, ಮಾದೇವ, ವಿಶ್ವನಾಥ್, ದೇವಿದಾಸ್, ನಾಗೇಶ್, ಅರುಣ, ನಾಗರಾಜ್, ರೇಣುಕಾ ಇವರು ಮನೆ ರಿಪೇರಿ ಯಲ್ಲಿ ಭಾಗವಹಿಸಿ ದ ಸ್ವಯಂ ಸೇವಕರು.
ವರದಿ:
ಮಾರುತಿ ಅಂಬಿಗ,
ಕೊಡ್ಲಾಗದ್ದೆ ಘಟಕದ ಪ್ರತಿನಿಧಿ, 
ಹಿಲ್ಲೂರು ವಲಯ, ಕುಮಟಾ.

Comments