ಸುಳ್ಯ: ಭಾರೀ ಮಳೆಯಿಂದ ರಸ್ತೆಗುರುಳಿದ ಮರಗಳು; ಸಂಚಾರ ಅಸ್ತವ್ಯಸ್ತ, ಮರ ತೆರವುಗೊಳಿಸಿದ ಸ್ವಯಂಸೇವಕರು

ಸುಳ್ಯ: ಜೂನ್ 22: ನಿಡ್ವಾಳ ಎಂಬಲ್ಲಿ ನಿನ್ನೆ ರಾತ್ರಿ ಸುರಿದ ಗಾಳಿ ಮಳೆಗೆ ರಸ್ತೆಗೆ ಅಡ್ಡಲಾಗಿ ಮರದ ಗೆಲ್ಲು ಬಿದ್ದಿದ್ದು ರಸ್ತೆ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಜನರ ಓಟಾಟಕ್ಕೆ ಸಮಸ್ಯೆಯಾಗಿತ್ತು. ಅದನ್ನು ಗಮನಿಸಿದ ಶೌರ್ಯ ಸ್ವಯಂಸೇವಕರು ರಸ್ತೆಯಲ್ಲಿ ಬಿದ್ದಿರುವ ಮರಗಳನ್ನು ತೆಗೆದು ವಾಹನಗಳು ಸುಗಮವಾಗಿ ಸಂಚರಿಸುವಂತೆ ಮಾಡಿದರು. "ಶೌರ್ಯ ವಿಪತ್ತು ನಿರ್ವಹಣಾ ಘಟಕ ನಿಂತಿಕಲ್ಲು ಇವರ ಸೇವೆ ಶ್ಲಾಘನೆಗೆ ಪಾತ್ರವಾಗಿದೆ.
ಈ ಸೇವೆಯಲ್ಲಿ ವಿಪತ್ತು ನಿರ್ವಹಣಾ ಸದಸ್ಯರಾದ ನಾರಾಯಣ, ರೇಗಪ್ಪ ಅಲೆಂಗಾರ, ದಿನೇಶ್, ಸುಕುಮಾರ ಅಲೆಂಗಾರ ರವರು ಭಾಗವಹಿಸಿದ್ದರು.
ವರದಿ:- ದಿನೇಶ್ ಪಜಿಂಬಿಲ ಸಂಯೋಜಕರು ಶೌರ್ಯ ವಿಪತ್ತು ನಿರ್ವಹಣಾ ಘಟಕ ನಿಂತಿಕಲ್ಲು

Comments