ಸುಳ್ಯ: ಮನೆ ರಿಪೇರಿ ಮಾಡಿಕೊಟ್ಟ ಕಲ್ಮಡ್ಕ ಘಟಕದ ಸ್ವಯಂಸೇವಕರು

ಸುಳ್ಯ: ಜೂನ್ 22: ಕುಕ್ಕಪ್ಪ ಬೊಳಿಯೂರು ಇವರ ಮನೆಯು ನಿರ್ಮಾಣ ಹಂತದಲ್ಲಿರುವ ಕಾರಣ ಅವರು ವಾಸ್ತವ್ಯ ಇರುವ ಹಳೆಯ ಮನೆಯ ರಿಪೇರಿ ಕೆಲಸ ವನ್ನು ಕಲ್ಮಡ್ಕ ಶೌರ್ಯ ವಿಪತ್ತು ನಿರ್ವಹಣಾ ಘಟಕ ಕಲ್ಮಡ್ಕ ಇದರ ಸದಸ್ಯರು ಮಾಡಿಕೊಟ್ಟರು.
ಮಳೆ ಬರುತ್ತಿರುವ ಹಿನ್ನೆಲೆಯಲ್ಲಿ ಇವರಿಗೆ ವಾಸ್ತವ್ಯಕ್ಕೆ ತೊಂದರೆಯಾಗಿತ್ತು. ಸಹಾಯ ಮಾಡುವಂತೆ ವಿನಂತಿಸಿಕೊಂಡ ಹಿನ್ನೆಲೆಯಲ್ಲಿ ಸ್ವಯಂಸೇವಕರು ಶ್ರಮದಾನ ನಡೆಸಿ ಹಂಚು ಹೊದಿಸುವ ಕೆಲಸ ಮಾಡಿದ್ದಾರೆ. ಸ್ವಯಂಸೇವಕರಾದ ಚನಿಯಪ್ಪ, ನವೀನ ಅಂಗಾರ, ಆನಂದ ಉಪಸ್ಥಿತರಿದ್ದರು.
ವರದಿ: ಆನಂದ. ಶೌರ್ಯ ವಿಪತ್ತು ನಿರ್ವಹಣಾ ಘಟಕ. ಕಲ್ಮಡ್ಕ

Comments