ಮಡಿಕೇರಿ: ಕಾಲು ಪೆಟ್ಟು ಮಾಡಿಕೊಂಡು ಆಸ್ಪತ್ರೆಗೆ ಸೇರಿದ ಅಜ್ಜಿಯನ್ನು ಚಿಕಿತ್ಸೆ ಕೊಡಿಸಿ ಮನೆಗೆ ತಲುಪಿಸಿದ ನಾಪೋಕ್ಲು ಘಟಕದ ಸ್ವಯಂಸೇವಕರು



ನಾಪೋಕ್ಲು: ಜೂನ್‌ 21:  ನಾಪೋಕ್ಲು ಸಮೀಪದ ಪಾಲೂರು ಗ್ರಾಮದಲ್ಲಿನ ವ್ರದ್ದೆಯೊಬ್ಬಳು ವಯೋಸಹಜವಾಗಿ ಮನೆಯ ಅಂಗಳದಲ್ಲಿ ಬಿದ್ದು ಕಾಲು ಮುರಿದುಕೊಂಡಿದ್ದು ಕರೆ ಬಂದ ಮೇರೆಗೆ ತಲುಪಿದ ಶೌರ್ಯ ಸದಸ್ಯರು ಕೂಡಲೇ ಆಂಬುಲೆನ್ಸ್ ಗೆ ಕರೆ ನೀಡಿ ವ್ರದ್ದೆಯನ್ನು ಆಸ್ಪತ್ರೆಗೆ ದಾಖಲಿಸಲು ಕಾರಣಕರ್ತರಾಗಿದ್ದಲ್ಲದೆ 10ದಿನಗಳ ಬಳಿಕ ಆಪರೇಷನ್ ಆದ ನಂತರ ಮನೆಗೆ ತಲುಪಿಸಿದ್ದು ಅದೇ ಶೌರ್ಯ ಸದಸ್ಯರು, ಆಪರೇಷನ್ ಮಾಡಿದಾಗ ಹಾಕಿದ ಹೊಲಿಗೆ ಬಿಚ್ಚಲು ಹೋಗಬೇಕಾಗಿರುವುದರಿಂದ ಇಂದು ಕರೆ ಬಂತು ಶೌರ್ಯ ಸದಸ್ಯರು ಇಂದು ಆಸ್ಪತ್ರೆಗೆ ಕಳುಹಿಸಿಕೊಟ್ಟರು ,*

*ಎಷ್ಟು ಸುಲಭದ ಕೆಲಸ ಯಾರಾದರು ಮಾಡಿಯಾರು? ಈ ಕೆಲಸಕ್ಕೆ ಶೌರ್ಯ ಸದಸ್ಯರೇ ಬೇಕಾ ಆದರೆ ಯಥಾಸ್ಥಿತಿ ಒಬ್ಬನಿಗೆ ನಡೆಯಲೇ ಕಷ್ಟದ ದಾರಿ ವ್ರದ್ದೆಯಂತು ಕನಿಷ್ಠ 100 ರಷ್ಟು ಭಾರ ಎತ್ತಲಿಕ್ಕೆ ನಾಲ್ವರು ಬೇಕೆ ಬೇಕು ,ಒಂದು ಸಲ ಹೋದವರು ಮತ್ತೆ ಹೋಗುವುದೇ ಇಲ್ಲ ಬೆಟ್ಟದಂತಿರುವ ಸ್ಥಳ ಊರಿನವರು ಯಾರು ಬರುವುದಿಲ್ಲ, ನಡೆಯಲಾಗದ ವ್ರದ್ದೆಯನ್ನು ಕುರ್ಚಿ ಯಲ್ಲಿ ಕುಳ್ಳಿರಿಸಿ ಕಿಲೋ ಮೀ ಹೊರಬೇಕು ಆಸರೆಯಾಗಿದ್ದು ಶೌರ್ಯ, ಊರಿನವರೇ ಬಾಯಲ್ಲಿ ಬೇರಳಿಡುವಂತೆ ಸದಾ ವ್ರದ್ದೇಗೆ ನೆರವಾಗುವ ನಾಪೋಕ್ಲು ಶೌರ್ಯ ಸದಸ್ಯರು ಆನಂದ ಭಾಷ್ಪ ಬಿರಿದ ತಾಯಿಯ ಆಶಿರ್ವಾದ, ಎಲ್ಲೆಡೆ ಮನೆ ಮಾತಾದಾ ಶೌರ್ಯ ಸದಸ್ಯರು*

*ಸೇವಾ ಕಾರ್ಯದಲ್ಲಿ ದಿಲೀಶ್ ಎನ್ ಬಿ, ಶಂಕರ್ ಬಿ ಹೆಚ್, ಸೀನಾ ಮಾಧವನ್,ಮಾಯಿಲಪ್ಪ, ಸುರೇಶ್ ಪಿ ಪಿ ಭಾಗವಹಿಸಿ ಮಾನವೀಯ ಸೇವೆಯನ್ನು ಮಾಡಿದರು


ವರದಿ
ದಿವ್ಯ
ಸಂಯೋಜಕಿ
ನಾಪೋಕ್ಲು

Comments