ಕಳಸ : ಶಾಲಾ ಮೇಲ್ಚಾವಣಿ ದುರಸ್ತಿ ಮಾಡಿಕೊಟ್ಟ ಶೌರ್ಯ ತಂಡ.

ಕಳಸ, ಜೂನ್ 25: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಸ್ವಸಹಾಯ ತಂಡದ ಸದಸ್ಯರು 17 ವರ್ಷದಿಂದ ಶಾಲೆಯ ಆವರಣದಲ್ಲಿ ತಮ್ಮ ವಾರದ ಸಭೆ ತರಬೇತಿ ಮುಂತಾಂದ ಯೋಜನೆಯ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದರು. ಈ ಶಾಲೆಯ ಕೊಠಡಿಯ ಒಂದು ಬಾಗ ನಿರ್ವಹಣೆ ಇಲ್ಲದೆ ಕುಸಿದು ಬಿದ್ದುದರಿಂದ ಅಪಾಯ ಸಂಭವಿಸುವ ಸಾಧ್ಯತೆಯಿತ್ತು. ಇದನ್ನು ಮನಗಂಡ ಸ್ವಯಂಸೇವಕರು ರಿಪೇರಿ ಮಾಡಿದ್ದಾರೆ. ಗ್ರಾಮ ಪಂಚಾಯತ್ ಸದಸ್ಯರಾದ ಪಾಪಣ್ಣ, ಕಳಸ ಗ್ರಾಮ ಪಂಚಾಯತ್ ಅದ್ಯಕ್ಷರು ಮತ್ತು ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು ಮಾರ್ಗದರ್ಶನ ನೀಡಿದರು.

Comments