ಮೂಡಿಗೆರೆ: ಪೊಲೀಸ್ ಇಲಾಖೆಗೆ ಸಹಕಾರ ನೀಡಿದ ಜಾವಳಿ ಘಟಕದ ಸ್ವಯಂಸೇವಕರು

ಮೂಡಿಗೆರೆ, ಜುಲೈ ೦೭, ೨೦೨೩: ಮೂಡಿಗೆರೆ ತಾಲೂಕಿನ ಬಾಳೂರು ಸಮೀಪ ಕಲ್ಲಕ್ಕಿ ಎಸ್ಟೇಟ್ ಗೆ ಕಾಫಿ ತೋಟದ ಕೆಲಸಕ್ಕಾಗಿ ಆಗಮಿಸಿದ ಧಾರವಾಡ ಮೂಲದ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಮೃತ ಪಟ್ಟ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದು ಪೋಲಿಸ್ ಅಧಿಕಾರಿಗಳೊಂದಿಗೆ ಶೌರ್ಯ ವಿಪತ್ತು ನಿರ್ವಹಣಾ ಘಟಕ ಜಾವಳಿಯ ಸ್ವಯಂಸೇವಕರು ಇಡೀ ದಿನ ಕಾರ್ಯಾಚರಣೆಯಲ್ಲಿ ತೊಡಗಿ ಶವವನ್ನು ಶವಗಾರಕ್ಕೆ ಸಾಗಿಸಲು ನೆರವು ನೀಡಿರುತ್ತಾರೆ. ವಿಪತ್ತು ನಿರ್ವಹಣಾ ಘಟಕದ ಸಂಯೋಜಕರಾದ ಚಂದ್ರ ಶೇಖರ್ ಜಾವಳಿ, ಸಾಗರ್, ಸ್ವಯಂ ಸೇವಕರಾದ ಸಂದೀಪ್, ರವಿ ಗಬ್ಗಲ್, ಪರಿಕ್ಷೀತ್ ಚಂದ್ರು ಕೂವೆ ರವರು ಇದ್ದರು.

Comments