ಕುಂದಾಪುರ :ಗಾಯಗೊಂಡು ರೈಲ್ವೆ ಹಳಿಯ ಬದಿಯಲ್ಲಿ ಬಿದ್ದಿರುವ ಗೋವಿನ ರಕ್ಷಣೆ ಮಾಡಿದ ಕಾಳಾವರ ಘಟಕದ ಸ್ವಯಂಸೇವಕರು
ಕಾಳಾವರ :ಜುಲೈ 14, ಸಂತಾವರ ಕಾಳಾವರ ದ ವ್ಯಾಪ್ತಿಯ ರೈಲ್ವೆ ರಸ್ತೆ ಯ ಚರಂಡಿಯಲ್ಲಿ 3ದಿನದ ಹಿಂದೆ ಪೆಟ್ಟಾಗಿ ಬಿದ್ದು ಜೀವನ್ಮರಣ ದ ಹೋರಾಟ ನೆಡೆಸುತಿದ್ದ ದನವನ್ನು ಸುಮಾರು 500ಮೀಟರ್ ವರೆಗೆ ಹೊತ್ತೋಯ್ದು ನಂತರ ವಾಹನ ದಲ್ಲಿ ಹೂವಿನ ಕೆರೆ ಗೋ ಶಾಲೆಗೆ ಚಿಕಿತ್ಸೆಗಾಗಿ ಕೊಂಡೋಯ್ಯಲಾಯಿತು,
ಘಟನೆ ನೆಡೆದು ಸುಮಾರು 3ದಿನ ವಾಗಿದ್ದು,ದನ ದ ಹಿಂಭಾಗ ಕ್ಕೆ ಪೆಟ್ಟಾಗಿ ಏಳಲು ಆಗದ ಸ್ಥಿತಿ ಯಲ್ಲಿ ಬಿದ್ದಿರುವ ಬಗ್ಗೆ ಇಂದು ಶೌರ್ಯ ಸ್ವಯಂ ಸೇವಕರಾದ ಸುಜಿತ್ ಕುಮಾರ್ ಶೆಟ್ಟಿ ರವರ ಗಮನಕ್ಕೆ ಬಂದಿದ್ದು ಕೂಡಲೇ ಕಾರ್ಯ ಪ್ರವೃತ್ತ ರಾದ ಶೌರ್ಯ ತಂಡ ದ ರಾಜಶೇಖರ್ ಹಾಗೂ ಮಂಜುನಾಥ ರವರು ರೈಲ್ವೆ ಸಿಬ್ಬಂದಿ ವಿಜಯ ಕುಮಾರ್ ಸ್ಥಳೀಯ ಸಮಾಜ ಸೇವಕ ರಾದ ರಾಘವೇಂದ್ರ ಅಸೋಡು, ಅನಿಲ್ ಕುಮಾರ್ ಅಸೋಡು, ಹಾಗೂ ರೈಲ್ವೆ ಯ ಅಧಿಕಾರಿ ಸುಭಾಸ್ ಚಂದ್ರ ಶೆಟ್ಟಿ, ಹಾಗೂ ಸ್ಥಳೀಯರ ಸಹಕಾರ ದಿಂದ ಈ ಕಾರ್ಯಚರಣೆ ನೆಡೆಸಲಾಯಿತು,
ಶೌರ್ಯ ತಂಡ ದ ಈ ಕಾರ್ಯ ಕ್ಕೆ ರೈಲ್ವೆ ಅಧಿಕಾರಿಗಳು ಅಭಿನಂದನೆ ಸಲ್ಲಿಸಿರುತ್ತಾರೆ,
ವರದಿ :ರಾಜಶೇಖರ್
ಘಟಕ ಪ್ರತಿನಿಧಿ
ಕಾಳಾವರ ಘಟಕ
Comments
Post a Comment