ಕುಮಟಾ: ರಾತ್ರಿಯ ವೇಳೆ ವಿದ್ಯುತ್ ತಂತಿಯ ಮೇಲೆ ಬಿದ್ದ ಮರ, ಸ್ಥಳಕ್ಕೆ ಧಾವಿಸಿ ತೆರವುಗೊಳಿಸಿದ ಸ್ವಯಂಸೇವಕರು.

ಕುಮಟಾ, ಜುಲೈ 07: ಅತಿಯಾದ ಮಳೆಯಿಂದ ಉರಕೇರಿ ಸಮೀಪದ ಲ್ಲಿ ವಿದ್ಯುತ್ ತಂತಿಯ ಮೇಲೆ ಮರ ಬಿದ್ದಿದ್ದು ವಿಷಯ ತಿಳಿದ ಧಾರೇಶ್ವರ ಘಟಕದ ಸ್ವಯಂಸೇವಕರು ಮರ ತೆರವುಗೊಳಿಸಿದರು.

 ರಾತ್ರಿ ಮಳೆಗೆ ಮರವೊಂದು ವಿದ್ಯುತ್ ಲೈನ್ ಮೇಲೆ ಬಿದ್ದಿದ್ದು ಸ್ವಯಂ ಸೇವಕರಾದ ಪ್ರವೀಣ್, ಶರತ್, ಮನೋಜ್ ಇವರು  ಲೈನ್ ಮ್ಯಾನ್ ಮಾದೇವ ಪಟಗಾರ ಜೊತೆ ಕೈ ಜೋಡಿಸಿ ಮರ ತೆಗೆಯುವಲ್ಲಿ ಸಹಾಯ ಮಾಡಿದ್ದಾರೆ.
ವರದಿ : ಕವಿತಾ ವೈದ್ಯ 
ಸಂಯೋಜಕಿ ಧಾರೇಶ್ವರ ಘಟಕ

Comments