ಶಿರಸಿ: ವಾಸದ ಮನೆ ನಿರ್ಮಿಸಿಕೊಟ್ಟ ಶಿರಸಿ ಘಟಕದ ಸ್ವಯಂಸೇವಕರು
ಜುಲೈ 09: ಮಾನ್ಯ ನಿರ್ದೇಶಕರಾದ ಶ್ರೀ ಬಾಬು ನಾಯ್ಕ ಸರ್, ಮಾನ್ಯ ಯೋಜನಾಧಿಕಾರಿಗಳಾದ ಶ್ರೀ ರಾಘವೇಂದ್ರ ಸರ್ , ಶಿರಸಿ A ವಲಯದ ಮೇಲ್ವಿಚಾರಕರಾದ ಮಮತಾ ಮೇಡಂ ಮಾರ್ಗದರ್ಶನದಲ್ಲಿ ಬಡ ಕುಟುಂಬಕ್ಕೆ ವಾಸದ ಮನೆಯನ್ನು ರಚನೆ ಮಾಡಿ ಕೊಡಲಾಯಿತು.
ಶಿರಸಿ ತಾಲ್ಲೂಕಿನ ಕುಳವೆ ಗ್ರಾಮ ಪಂಚಾಯತ್ ಬರೂರು ಸಮೀಪದ ಕಲಗದ್ದೆ ಎಂಬ ಕಳೆದ 35 ವರ್ಷದಿಂದ ತಟ್ಟಿ ಬಿಡಾರದಲ್ಲಿ ದಯನೀಯ ಸ್ಥಿತಿಯಲ್ಲಿ ವಾಸ ಮಾಡುತ್ತಿರುವ 55 ವರ್ಷದ ಮಹೇಶ್ ಜಟ್ಟಿ ನಾಯ್ಕ ಅವರು 15 ವರ್ಷದಿಂದ ಪ್ಯಾರಾಲಿಸಿಸ್ ಕಾಯಿಲೆ ಇಂದ ಬಳಲುತ್ತಿದ್ದಾರೆ. ನಡೆಯಲು ಆಗದ ಸ್ಥಿತಿಯಲ್ಲಿ ಇದ್ದಾರೆ ಹಾಗೂ 45 ವರ್ಷದ ಪ್ರೇಮ ಜಟ್ಟಿ ನಾಯ್ಕ ಕೂಲಿ ಮಾಡಿ ಮನೆಯ ನಿರ್ವಹಣೆ ಮಾಡುತ್ತಿದ್ದಾರೆ.
ಅವರು ವಾಸ ಮಾಡುವ ಮನೆ ಜೋರಾಗಿ ಮಳೆ ಬಂದರೆ ಬೀಳುವ ಸ್ಥಿತಿಯಲ್ಲಿರುವದನ್ನು ನೋಡಿ ಸಾಯಿ ಎನ್ ಜಿ ಓ ಪ್ರಮುಖರಾದ ಪ್ರಭಾಕರ್ ಅವರು ತಾತ್ಕಾಲಿಕವಾಗಿ ಉಳಿಯಲು ಶೆಡ್ ಗೆ ಬೇಕಾದ ವಸ್ತುಗಳನ್ನು ನೀಡಿದ್ದಾರೆ.ಹಾಗೂ ಮುಂದಿನ ದಿನಗಳಲ್ಲಿ ಮನೆ ನಿರ್ಮಾಣ ಮಾಡಿ ಕೊಡುವುದಾಗಿ ಹೇಳಿದ್ದಾರೆ. ಗಣೇಶನಗರ ಶಿರಸಿ A ವಲಯದ ಶೌರ್ಯ ವಿಪತ್ತು ನಿರ್ವಹಣಾ ಘಟಕ ಸದಸ್ಯರು ಇಂದು ಅವರಿಗೆ ಉಳಿಯಲು ಶೆಡ್ ನಿರ್ಮಾಣ ಮಾಡಿ ಹಳೆಯ ಬಿಡಾರದಲ್ಲಿ ಇದ್ದ ಎಲ್ಲಾ ವಸ್ತುಗಳನ್ನು ಶೆಡ್ ಗೆ ಸಾಗಿಸಿ ಉಳಿಯಲು ವ್ಯವಸ್ಥೆ ಮಾಡಿ ಕೊಟ್ಟಿದ್ದಾರೆ.
ವರದಿ:
ಶಿಲ್ಪಾ ಭಾಸ್ಕರ್ ನಾಯ್ಕ
ಸಂಯೋಜಕರು
Comments
Post a Comment