ಶಿರಸಿ: ರಸ್ತೆಯಲ್ಲಿ ಬಿದ್ದ ಮರ ತೆರವುಗೊಳಿಸಿ ಸಂಚಾರ ಸುಗಮಗೊಳಿಸಿದ ಅಂಡಗಿ ಘಟಕದ ಸ್ವಯಂಸೇವಕರು

ಜುಲೈ 24: ಅಂಡಗಿಗೆ ಹೋಗುವ ರಸ್ತೆಯಲ್ಲಿ ದೊಡ್ಡದೊಂದು ಮರ ಬಿದ್ದಿರುವ ಸುದ್ದಿಯನ್ನು ತಿಳಿದು ಶೌರ್ಯ ತಂಡದ ಎಲ್ಲಾ ಸದಸ್ಯರು ಮತ್ತು ಅರಣ್ಯ ಇಲಾಖೆಅಧಿಕಾರಿಗಳಾದ ರಮೇಶ್ ಸರ್ ಮತ್ತು ಕೆಇಬಿ ಅಧಿಕಾರಿಗಳಾದ ರಾಜಣ್ಣ ಮತ್ತು ಶಂಕರ್ ಸರ್ ಈ ಒಂದು ಕೆಲಸಕ್ಕೆ ಕೈಜೋಡಿಸಿ ಮರವನ್ನು ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಈ ಸಮಯದಲ್ಲಿ ಶೌರ್ಯ ತಂಡದ ಸದಸ್ಯರಿಗೆ ಅರಣ್ಯ ಇಲಾಖೆಯ ಅಧಿಕಾರಿಗಳಿಂದ ಮತ್ತು ಕೆಇಬಿ ಅಧಿಕಾರಿಗಳಿಂದ ಆರೋಗ್ಯ ರಕ್ಷಾ ಕಾರ್ಡ್ ವಿತರಣೆ ಮಾಡಲಾಯಿತು. ಸ್ವಯಂಸೇವಕರಾದ ಪರಶುರಾಮ್, ನಂಜುಂಡ, ಸುಜಯ್, ಮಣಿಕಂಠ, ಸುಮಂತ್, ದರ್ಶನ್, ಗುರುರಾಜ್, ಮೋಹನ್, ಮಂಜುನಾಥ್, ಸೇವಾ ಪ್ರತಿನಿಧಿ ಸೀಮಾ ನಾಯ್ಕ್ ಉಪಸ್ಥಿತರಿದ್ದರು
ವರದಿ :ಸೀಮಾ ನಾಯ್ಕ್ ಸಂಯೋಜಕ...

Comments