ುಮಟಾ: ರಸ್ತೆಯಲ್ಲಿ ಉರುಳಿದ ಮರ, ವಾಹನ ಸಂಚಾರ ಅಸ್ತವ್ಯಸ್ತ; ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟ ಸ್ವಯಂಸೇವಕರು

ಕುಮಟಾ, ಜುಲೈ ೦೮: ಮೂರೂರಿನಿಂದ ಕಲ್ಲಬ್ಬೆಯ ಮಾರ್ಗದಲ್ಲಿ ಕಂದವಳ್ಳಿಯ ಕಡೆಗೆ ಹೋಗುವಾಗ ಕಲ್ಲಬ್ಬೆಯ ರಸ್ತೆಯಲ್ಲಿ ಮರ ಬಿದ್ದಿರುವುದರಿಂದ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಅದನ್ನು ಗಮನಿಸಿದ ಶೌರ್ಯ ಸದಸ್ಯರು ತಕ್ಷಣ ಸ್ಥಳೀಯರಿಂದ ಅಗತ್ಯ ಪರಿಕರಗಳನ್ನು ತೆಗೆದುಕೊಂಡು ರಸ್ತೆಯಲ್ಲಿ ಬಿದ್ದ ಮರವನ್ನು ಕಡಿದು ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಮೂರೂರು ಘಟಕದ ಸ್ವಯಂಸೇವಕರ ಈ ಸೇವೆ ಮೆಚ್ಚುಗೆಗೆ ಪಾತ್ರವಾಗಿದೆ. ಈ ಸಂದರ್ಭದಲ್ಲಿ ಶೌರ್ಯ ಸದಸ್ಯರಾದ ಚಂದ್ರಕಾAತ ಗೌಡ, ದತ್ತಾತ್ರಯ ಗೌಡ, ಶಂಕರ ಗೌಡ, ಸುರೇಶ ಗೌಡ ಹಾಗೂ ಲಂಬೋದರ ಗೌಡ ಉಪಸ್ಥಿತರಿದ್ದರು.
ವರದಿ: ಚಂದ್ರಕಾAತ ಗೌಡ ಮೂರೂರು ಶೌರ್ಯ ವಿಪತ್ತು ನಿರ್ವಹಣಾ ಸಂಯೋಜಕರು..

Comments