ಕಳಸ: ಶೌರ್ಯ ಘಟಕಕ್ಕೆ ಭೇಟಿ ಕೊಟ್ಟ ಬಾಳೆಹೊನ್ನೂರ್ ಸಬ್ ಇನ್ಸ್ಪೆಕ್ಟರ್ ದಿಲೀಪ್ ಕುಮಾರ್; ಸ್ವಯಂಸೇವಕರ ಸೇವೆಗೆ ಶ್ಲಾಘನೆ
ಕಳಸ, ಜುಲೈ 10: ಖಾಂಡ್ಯಹೋಬಳಿ ದೇವದಾನ ಗ್ರಾಮದ ಕಡಬಗೆರೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಕಚೇರಿಯಲ್ಲಿ ಖಾಂಡ್ಯ ಶೌರ್ಯ ವಿಪತ್ತು ಘಟಕಕ್ಕೆ ಭೇಟಿ ಕೊಟ್ಟ ಬಾಳೆಹೊನ್ನೂರ್ ಸಬ್ ಇನ್ಸ್ಪೆಕ್ಟರ್ ದಿಲೀಪ್ ಕುಮಾರ್ ಅವರು ಮಾತಾಡಿ ನಾವುಗಳು ಯಾವುದೇ ಕಾರ್ಯಕ್ರಮ ಮಾಡಬೇಕಾದರೆ ಕಾನೂನ್ ರೀತಿಯಲ್ಲಿ ಮಾಡಬೇಕು ನಿಮ್ಮಂತ ಯುವಕರು ನಮ್ಮೊಡನೆ ಕೈ ಜೋಡಿಸಿದರೆ ಯಾವುದೇ ಸಮಸ್ಯೆ ಇರುವುದಿಲ್ಲ ಹಾಗೂ ನಿಮ್ಮ ಸಾಮಾಜಿಕ ಸೇವೆ ಅನನ್ಯ ಎಂದು ಶ್ಲಾಘನೆ ಮಾಡಿದರು. ಮೇಲ್ವಿಚಾರಕರಾದ ಸುರೇಶ್ ಅವರು ಮಾತಾಡಿ ನಮ್ಮ ಸಹಕಾರ ಸದಾ ಇರುವುದಾಗಿ ಹೇಳಿದರು. ಸಂಯೋಜಕ ಚಂದ್ರಶೇಖರ್ ರೈ 3:ವರ್ಷದ ವಿಪತ್ತು ಘಟಕದ ಸಾಧನೆಯ ವಿವರಣೆ ಕೊಟ್ಟರು. ಸೇವಾಪ್ರತಿನಿಧಿ ಶಾಜಿಯ ನಿರೂಪಣೆ ಮಾಡಿ ಸ್ವಯಂ ಸೇವಕರಾದ ರಘುಪತಿ ಸ್ವಾಗತ ಮಾಡಿ ಪಲ್ಲವಿಗಣೇಶ್ ಧನ್ಯವಾದಗಳನ್ನು ಹೇಳಿದರು.
ಸೇವಾಪ್ರತಿನಿಧಿ ನಂದಿತಾ ಸೌಮ್ಯ ಹಾಗೂ ಖಾಂಡ್ಯ ಶೌರ್ಯ ವಿಪತ್ತು ಘಟಕದ ಸ್ವಯಂ ಸೇವಕರು ಇದ್ದರು ಎಲ್ಲರಿಗೂ ಧನ್ಯವಾದಗಳು
ವರದಿ:
ಚಂದ್ರಶೇಖರ ರೈ
ಸಂಯೋಜಕ
ಖಾಂಡ್ಯ ಶೌರ್ಯ ವಿಪತ್ತು ನಿರ್ವಹಣ ಘಟಕ
Comments
Post a Comment