ಕುಮಟಾ: ರಸ್ತೆ ಗೆ ಅಡವಾಗಿ ಬಿದ್ದ ಮರಗಳನ್ನು ತೆರವು ಗೊಳಿಸಿದ ಕೊಡ್ಲಗದ್ದೆ ಘಟಕದ ಸ್ವಯಂ ಸೇವಕರು.

ಕುಮಟಾ, ಜುಲೈ 07: ನಿನ್ನೆ ಜೋರಾದ ಮಳೆಯಿಂದ ಬ್ರಹತ್ ಗಾತ್ರದ ಎರಡು ಮರ ರಸ್ತೆ ಗೆ ಅಡ್ಡವಾಗಿ ಬಿದ್ದು ಓಡಾಡಲು ತೊಂದರೆ ಆಗಿತ್ತು. ವಿಷಯ ತಿಳಿದು ಸ್ಥಳಕ್ಕೆ ತೆರಳಿದ ಸ್ವಯಂಸೇವಕರು ಸುಮಾರು 3-30ರ ವೇಳೆಗೆ ರಸ್ತೆ ಗೆ ಅಡವಾಗಿ ಬಿದ್ದ ಮರಗಳನ್ನು ತೆರವುಗೊಳಿಸಿದರು. ಸ್ವಯಂ ಸೇವಕರ ಜೊತೆಗೆ ಉಮೇಶ್, ದತ್ತಾತ್ರೇಯ, ಮಂಜುನಾಥ್ ಇವರು ಮರ ರಸ್ತೆ ಪಕ್ಕದಲ್ಲಿ ಇಡಲು ಸಹಾಯ ಸಹಕಾರ ನೀಡಿದ್ದಾರೆ. ಸ್ವಯಂ ಸೇವಕರಾದ ಮೋಹನ್, ಅರುಣ, ನಾಗರಾಜ್, ಮಾದೇವ, ಶೇಖರ್, ನಾಗೇಶ್ ಇದ್ದರು.
ವರದಿ: ಮಾರುತಿ ಅಂಬಿಗ, ಕೊಡ್ಲಾಗದ್ದೆ ಘಟಕದ ಪ್ರತಿನಿಧಿ, ಹಿಲ್ಲೂರು ವಲಯ, ಕುಮಟಾ.

Comments