ಬೆಳ್ತಂಗಡಿ: ಶಾಲೆಯ ಪರಿಸರದಲ್ಲಿ ಹಣ್ಣು ಹಂಪಲು ಗಿಡ ನಾಟಿ ಮಾಡಿದ ಪುದುವೆಟ್ಟು ಘಟಕದ ಸ್ವಯಂಸೇವಕರು

ಜುಲೈ, 21: ಪುದುವೆಟ್ಟು ಶೌರ್ಯ ಸ್ವಯಂ ಸೇವಕರು ವನಮಹೋತ್ಸವ , ಹಾಗೂ ಹಣ್ಣಿನ ಗಿಡ ನಾಟಿ ಕಾರ್ಯಕ್ರಮವನ್ನು ಶ್ರೀ ಧರ್ಮಸ್ಥಳ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪುದುವೆಟ್ಟು ಇಲ್ಲಿ ನಡೆಸಿದರು. ಶಾಲಾ ಮುಖ್ಯ ಶಿಕ್ಷಕರು, ಸಹಶಿಕ್ಷಕರು ಶಾಲಾ ಮಕ್ಕಳು ಶ್ರಮದಾನದಲ್ಲಿ ಕೈ ಜೋಡಿಸಿದರು. ಸುಮಾರು 45 ವಿವಿಧ ಜಾತಿಯ ಹಣ್ಣಿನ ಗಿಡಗಳನ್ನು ನಾಟಿ ಮಾಡಲಾಯಿತು. ಕಾರ್ಯಕ್ರಮದಲ್ಲಿ ಜನಜಾಗೃತಿ ಗ್ರಾಮ ಸಮಿತಿ ಅಧ್ಯಕ್ಷರಾದ ದೇವನ್ನಾಗೌಡ ರು ಗಿಡ ನಾಟಿ ಮಾಡುವುದರ ಮೂಲಕ ಚಾಲನೆ ಕಿಶೂರ್, ಧನ್ಯ ಕುಮಾರ್, ಆನಂದ, ಡಯಾನ ಭಾಗವಹಿಸಿದರು. ಶ್ರಮದಾನಕ್ಕೆ ನೆರಿಯ ವಲಯದ ಮೇಲ್ವಿಚಾರಕರಾದ ರಾಜೇಶ್ ಜಿ ಎನ್ ಮಾರ್ಗದರ್ಶನ ನೀಡಿದರು.
ವರದಿ: ಸಂಯೋಜಕ ರು ಆನಂದ ಗೌಡ ಪುದುವೆಟ್ಟು.

Comments