ಕುಮಟಾ: ವಾಸದ ಮನೆ ಕುಸಿತ; ಸುರಕ್ಷಿತ ಸ್ಥಳಕ್ಕೆ ಕುಟುಂಬವನ್ನು ವರ್ಗಾಯಿಸಿ ತಾತ್ಕಾಲಿಕ ವಾಸ್ತವ್ಯ ವ್ಯವಸ್ಥೆ ಮಾಡಿಕೊಟ್ಟ ಮೂರುರು ಘಟಕದ ಸ್ವಯಂಸೇವಕರು

ಕುಮಟಾ, ಜುಲೈ 08: ಅತಿಯಾದ ಮಳೆಯಿಂದ ವಾಸದ ಮನೆಯ ಮಣ್ಣಿನ ಮನೆಯ ಗೋಡೆ ಕುಸಿದ ಘಟನೆ ಕುಮಟಾ ತಾಲ್ಲೂಕಿನ ಮುರೂರು ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಕೆಳಗಿನ ಕಂದವಳ್ಳಿಯಲ್ಲಿ ನಡೆದಿದೆ.
"ಶಂಕರ ತುಳಸು ಗೌಡ" ರವರು ವಾಸ್ತವವಾಗಿ ಇರುವ ಮನೆಯು ಮಣ್ಣಿನಿಂದ ನಿರ್ಮಾಣವಾಗಿದ್ದರಿಂದ ನಿನ್ನೆ ರಾತ್ರಿ ಅತಿಯಾದ ಮಳೆಯಿಂದಾಗಿ ಗೋಡೆ ಕುಸಿದಿದೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಸ್ವಯಂಸೇವಕರು ಮನೆಯ ಹಂಚುಗಳನ್ನು ಪ್ರತ್ಯೇಕಿಸಿ ಕುಟುಂಬವನ್ನು ಸುರಕ್ಷಿತ ಸ್ಥಳಕ್ಕೆ ವರ್ಗಾವಣೆ ಮಾಡಿರುತ್ತಾರೆ. ಮನೆಯ ಸ್ವಚ್ಚತೆ ಮಾಡಿಕೊಟ್ಟು ತಾತ್ಕಾಲಿಕವಾಗಿ ಉಳಿಯಲು ವ್ಯವಸ್ಥೆ ಮಾಡಿಕೊಟ್ಟಿರುತ್ತಾರೆ. ಮೂರುರು ಘಟಕದ ಸ್ವಯಂಸೇವಕರು ತುರ್ತು ಸ್ಪಂದನೆ ನೀಡಿದ್ದು ಶೌರ್ಯ ಘಟಕದ ಸಂಯೋಜಕರಾದ ಚಂದ್ರಕಾಂತ ಗೌಡ, ಘಟಕ ಪ್ರತಿನಿಧಿ ದತ್ತಾತ್ರಯ ಗೌಡ, ಸದಸ್ಯರಾದ ಸುರೇಶ ಗೌಡ, ಲಂಬೋದರ ಗೌಡ, ಶ್ರೀನಿವಾಸ ಗೌಡ, ಇವರು ಉಪಸ್ಥಿತರಿದ್ದರು.
ವರದಿ: ದತ್ತಾತ್ರಯ ಗೌಡ. ಮುರೂರು ಶೌರ್ಯ ವಿಪತ್ತು ನಿರ್ವಹಣಾ ಘಟಕ ಪ್ರತಿನಿಧಿ.

Comments