ಸುಳ್ಯ: ಬಡ ವೃದ್ಧೆಯ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ ಸಂಪಾಜೆ ಘಟಕದ ಸ್ವಯಂಸೇವಕರು
ಜುಲೈ, 21: ಸಂಪಾಜೆ ಗ್ರಾಮದಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿರುವ ಬಡ ಕುಟುಂಬದ ಮಹಿಳೆ ಮನೆಗೆ ಸುಮಾರು ಎರಡು ತಿಂಗಳಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ಮಾಹಿತಿ ತಿಳಿದ ಸ್ವಯಂಸೆವಕರು ಪಂಚಾಯಿತಿ ಅಧ್ಯಕ್ಷರು ಹಾಗೂ ವಾರ್ಡ್ ಸದಸ್ಯರಿಗೆ ಗಮನಕ್ಕೆ ತಂದಾಗ ಅವರು ತಕ್ಷಣವೇ ಸ್ಪಂದಿಸಿ ವಿದ್ಯುತ್ ಸಂಪರ್ಕ ಒದಗಿಸಿಕೊಟ್ಟರು.
ಮಹಿಳೆ ನಿರ್ಗತಿ ಕರಾಗಿದ್ದರಿಂದ ಮಾಸಾಸನಕ್ಕಾಗಿ ವಲಯ ಮೇಲ್ವಿಚಾರಕರಾದ ಶ್ರೀಮತಿ ಜಯಶ್ರೀ ಅವರ ಗಮನಕ್ಕೆ ತಂದಾಗ ತಕ್ಷಣವೇ ಭೇಟಿಕೊಟ್ಟು ಮಾಸಾಸನ ಮನವಿ ಪಡೆದುಕೊಂಡರು. ಘಟಕದ ವತಿಯಿಂದ ವೃದ್ಧೆ ಗೆ ಹಾಲು, ಹಣ್ಣು, ಬ್ರೆಡ್ ಗಳನ್ನು ನೀಡಲಾಯಿತು .ಈ ಸಂದರ್ಭದಲ್ಲಿ ಸೇವಾ ಪ್ರತಿನಿಧಿ ತಾರಾ ಎಮ್.ಸಿ.ಉಪಸಿದ್ಧರಿದ್ದರು ಘಟಕದ ಸದಸ್ಯರಾದ, ಚಿದಾನಂದ ಭಾರತಿ ,ಸವಿತಾ. ಸಲ್ಲಿಸಿದರು.
ವರದಿ- ಚಿದಾನಂದ ಸಂಯೋಜಕರು, ಸಂಪಾಜೆ ಘಟಕ.
Comments
Post a Comment