ಕಳಸ: ಸೇತುವೆಯ ಮೇಲೆ ತುಂಬಿ ನಿಂತ ನೀರು; ವಾಹನ ಸಂಚಾರಕ್ಕೆ ತೊಂದರೆ, ಸರಾಗ ಹರಿವಿಗೆ ವ್ಯವಸ್ಥೆ ಮಾಡಿದ ಸ್ವಯಂ ಸೇವಕ ಚೇತನ್

ಕಳಸ, ಜುಲೈ 08: ಶೃಂಗೇರಿ. ಚಿಕ್ಕಮಗಳೂರು ಮುಖ್ಯ ರಸ್ತೆಯ ಹ್ಯಾರಂಬಿಗೆ ಹೋಗುವ ರಸ್ತೆಯಲ್ಲಿ ಇರುವ ಸೇತುವೆ ಮೇಲೆ ನೀರು ತುಂಬಿ ಶಾಲಾ ಮಕ್ಕಳಿಗೆ ಹಾಗೂ ಪಾದಚಾರಿಗಳಿಗೆ. ಬೈಕ್ ಸವಾರರಿಗೆ ತುಂಬಾ ತೊಂದರೆಯಾಗಿತ್ತು. ಯಾವುದೇ ಸಮಯದಲ್ಲಿ ದುರ್ಘಟನೆ ನಡೆಯುವ ಸಾಧ್ಯತೆ ಇದ್ದವು. ಇದನ್ನು ಮನಗಂಡ ಸ್ವಯಂ ಸೇವಕರಾದ ಚೇತನ್ ಮಣ್ಣಿನಿಂದ ತುಂಬಿದ್ದ ಸೇತುವೆ ಮೇಲಿನ ತೂಬನ್ನು ತೆರವು ಮಾಡಿ ನೀರು ಸರಾಗವಾಗಿ ಹರಿಯುವಂತೆ ಮಾಡಿದರು. ಜೇನುಗದ್ದೆ ಪಶುಸಂಗೋಪನ ಇಲಾಖೆಯಲ್ಲಿ ಕೆಲಸ ಮಾಡುವ ಜಗದೀಶ್ ಇವರೊಂದಿಗೆ ಇದ್ದು ಸಾಥ್ ನೀಡಿದರು. ವರದಿ: ಚಂದ್ರಶೇಖರ್ ರೈ. ಸಂಯೋಜಕ ಖಾಂಡ್ಯ ಶೌರ್ಯ ವಿಪತ್ತು ನಿರ್ವಹಣ ಘಟಕ

Comments