ಕುಮಟಾ: ಅತಿಯಾದ ಮಳೆ ಅಲ್ಲಲ್ಲಿ ವಿದ್ಯುತ್ ತಂತಿಯ ಮೇಲೆ ಬಿದ್ದ ಮರಗಳು, ತೆರವುಗೊಳಿಸಿ ಸಂಭಾವ್ಯ ಅಪಾಯ ತಪ್ಪಿಸಿದ ಧಾರೇಶ್ವರ ಘಟಕದ ಸ್ವಯಂಸೇವಕರು
ಅತಿಯಾದ ಮಳೆಯಿಂದ ಅಲ್ಲಲ್ಲಿ ವಿದ್ಯುತ್ ತಂತಿಯ ಮೇಲೆ ಮರಗಳು ಬಿದ್ದು ಅಪಾಯಕ್ಕೆ ತೆರೆದುಕೊಂಡಿದ್ದವು. ವಿಷಯ ತಿಳಿದ ಶೌಯಱ ಸ್ವಯಂಸೇವಕರು ಮರಗಳನ್ನು ತೆರವುಗೊಳಿಸಿ ಸಂಭಾವ್ಯ ಅಪಾಯ ತಪ್ಪಿಸಿದ ಧಾರೇಶ್ವರ ಘಟಕದ ಸ್ವಯಂಸೇವಕರು
ನಿನ್ನೆ ರಾತ್ರಿ ಜೋರಾಗಿ ಬಂದ ಮಳೆ ಗಾಳಿಗೆ ಬೆತ್ತಗೆರಿ ರಸ್ತೆಯಲ್ಲಿ ದೊಡ್ಡ ಮರ ಬಿದ್ದಿತ್ತು. ಓಡಾಡಲು ಕಷ್ಟವಾಗಿತ್ತು. ಅಲ್ಲಿ ವಿಷಯ ತಿಳಿದ ನಮ್ಮ ಸ್ವಯಂ ಸೇವಕರು ಇಂದು ಬೆಳಿಗ್ಗೆ 8 ಗಂಟೆ ಬಂದು ಬರುವ ಸಂದರ್ಭದಲ್ಲಿ ಅಲ್ಲೇ ಹರ್ನಿರ್ ಗ್ರಾಮದ ಹತ್ತಿರ ಬಿದ್ದ ಅಕೇಶಿಯ ಮರವನ್ನು ಬಿದ್ದಿರುವುದನ್ನು ಕಂಡು ಸಾರ್ವಜನಿಕರಿಗೆ ಸಮಸ್ಯೆ ಬಾರದಂತೆ ಅದನ್ನು ತೆರವುಗೊಳಿಸಿದ್ದಾರೆ.
ನಂತರ 9-30 ಗೆ ಹೋಗಿ ಬೆತ್ತಗೇರಿ ಹತ್ತಿರ ಹೋಗಿ ಆಲ್ಲಿ ಬಿದ್ದಿರುವ ಮರವನ್ನು ತೆಗೆದು ಕರೆಂಟ್ ಲೈನ್ ಮೇಲೆ ಬಿದ್ದಿರುವ ಹೆಗಲನ್ನು ತೆಗಿದಿದ್ದಾರೆ.. ಹಾಗೆ 10-30 ಗೆ ಬೆತ್ತಗೆರಿ ಶಾಲೆ ಹತ್ತಿರಕ್ಕೆ ಹೋಗಿ ಅಲ್ಲಿರುವ ಶಾಲೆ ಮೇಲೆ ಬಿದ್ದಿರುವ ಸಣ್ಣ ಮರವನ್ನು ಕಡೆದು ಹಾಕಿ ಒಳ್ಳೆಯ ಕೆಲಸ ಮಾಡಿರುತ್ತಾರೆ ...
ಸ್ವಯಂ ಸೇವಕರಾದ ಹನುಮಂತ ಪಟಗಾರ, ಪಾಂಡುರಂಗ ಪಟಗಾರ, ತಿಮ್ಮಪ್ಪ ಪಟಗಾರ, ವಿಲಾಸ್ ಪಟಗಾರ, ವೆಂಕಟೇಶ್ ಪಟಗಾರ, ಗಣೇಶ್ ಪಟಗಾರ, ಮಹೇಶ್ ಪಟಗಾರ ಭಾಗಿಯಾಗಿದ್ದರು...
ವರದಿ : ಕವಿತಾ ವೈದ್ಯ
ಸಂಯೋಜಕಿ ಧಾರೇಶ್ವರ ಘಟಕ
Comments
Post a Comment