ನೇತ್ರಾವತಿ ನದಿಯ ಸ್ನಾನಘಟ್ಟದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ; ಕಾರ್ಯಾಚರಣೆ ನಡೆಸಿ ಪೊಲೀಸರಿಗೊಪ್ಪಿಸಿದ ಸ್ವಯಂಸೇವಕರು
ಡಿಸೆಂಬರ್ 10: ಇಂದು ಬೆಳಿಗ್ಗೆ ನೇತ್ರಾವತಿ ನದಿಯ ಸ್ನಾನಘಟ್ಟದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಸ್ನಾನ ಮಾಡುತ್ತಿದ್ದ ಜನರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಶವ ತೆಗೆಯುವ ಕಾರ್ಯಾಚರಣೆಗೆ ಸಹಕರಿಸಲು ಪೊಲೀಸರು ಉಜಿರೆ ಘಟಕ ಪ್ರತಿನಿಧಿ ರವೀಂದ್ರ ಇವರಿಗೆ ಬೆಳಿಗ್ಗೆ 5.30 ರ ವೇಳೆಗೆ ಫೋನ್ ಕರೆ ಮಾಡಿದ್ದು ಕೂಡಲೇ ಸ್ಥಳಕ್ಕೆ ಧಾವಿಸಿದ ಇವರು ಸ್ವಯಂಸೇವಕರಾದ ಶಿಶಿಲ-ಅರಿಶಿನಮಕ್ಕಿ ಘಟಕದ ಅವಿನಾಶ್ ಬಿಡೆ, ಉಜಿರೆ ಘಟಕದ ರಾಘವೇಂದ್ರ, ಶಶಿಕುಮಾರ್ ಇವರೊಂದಿಗೆ ಕಾರ್ಯಾಚರಣೆ ನಡೆಸಿ ಶವವನ್ನು ಮೇಲೆತ್ತುವಲ್ಲಿ ಯಶಸ್ವಿಯಾದರು.
ಪೊಲೀಸ್ ಠಾಣಾಧಿಕಾರಿಗಳ ಉಪಸ್ಥಿತಿಯಲ್ಲಿ ಕಾರ್ಯಾಚರಣೆ ನಡೆಸಿದ್ದು ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುಂದಿನ ಕ್ರಮಕ್ಕಾಗಿ ಶವವನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.
ವರದಿ:
ರವೀಂದ್ರ
ಘಟಕ ಪ್ರತಿನಿಧಿ
ಉಜಿರೆ ಘಟಕ
Comments
Post a Comment