ಹದಿನೈದು ಅಡಿ ಆಳದ ಕಾಲುವೆಯಲ್ಲಿ ಆಯತಪ್ಪಿ ಬಿದ್ದ ಆಕಳು; ಸುರಕ್ಷಿತವಾಗಿ ಮೇಲಕ್ಕೆ ಎತ್ತಿದ ಉಜಿರೆ ಘಟಕದ ಶೌರ್ಯ ಸ್ವಯಂಸೇವಕರು.
ಜನವರಿ 22: ಉಜಿರೆ ಸಿದ್ಧವನದ ತೋಟದಲ್ಲಿರುವ ಕಾಲುವೆಯಲ್ಲಿ ಜಾನುವಾರು ಬಿದ್ದು ಗಾಯಗೊಂಡ ಘಟನೆ ಇಂದು ಮಧ್ಯಾಹ್ನ ನಡೆದಿದೆ.
ಮಧ್ಯಾಹ್ನ ಸುಮಾರು 2.30 ರ ವೇಳೆಗೆ ಕಾಲು ಜಾರಿದ ಆಕಳು ಸುಮಾರು ಹದಿನೈದು ಅಡಿ ಆಳದ ಕಾಲುವೆಯಲ್ಲಿ ಬಿದ್ದು ಗಾಯಗೊಂಡಿದೆ. ಮುಂಬಾಗದ ಕಾಲಿಗೆ ಗಾಯವಾಗಿದ್ದು ಎದ್ದೇಳುವ ಸ್ಥಿತಿಯಲ್ಲಿ ಇರಲಿಲ್ಲ.
ಸಾಯಂಕಾಲ ಕೊಟ್ಟಿಗೆಗೆ ಹಿಂದಿರುಗದೇ ಇರುವ ಹಿನ್ನಲೆಯಲ್ಲಿ ತೋಟದ ಸುತ್ತಮುತ್ತಲಿನ ಪ್ರದೇಶದಲ್ಲಿ ಹುಡುಕಿದಾಗ ಕಾಲುವೆಯಲ್ಲಿ ಆಕಳು ಪತ್ತೆಯಾಗಿದೆ.
"ಶೌರ್ಯ" ವಿಪತ್ತು ನಿರ್ವಹಣಾ ಘಟಕ ಉಜಿರೆಯ ಸಂಯೋಜಕರಾದ ಸಂತೋಷ್ ಗೌಡ ರವರಿಗೆ ಸಿದ್ದವನದ ಸಿಬ್ಬಂದಿ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಉಜಿರೆ ಘಟಕದ ಘಟಕ ಪ್ರತಿನಿಧಿ ರವೀಂದ್ರ, ಸ್ವಯಂಸೇವಕರಾದ ಸಂದೇಶ್, ಸುಧೀರ್, ರಾಘವೇಂದ್ರ, ಸಚೀನ್ ಬಿಡೆ ಹಾಗೂ ಸಂಯೋಜಕರಾದ ಸಂತೋಷ್ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ನಡೆಸಿದರು.
ಸ್ಥಳೀಯರು, ಸಿದ್ದವನದ ಸಿಬ್ಬಂದಿ ಸೇರಿಕೊಂಡು ಜೆ.ಸಿ.ಬಿ ಸಹಾಯದಿಂದ ಆಕಳನ್ನು ಮೇಲಕ್ಕೆತ್ತಲು ಯಶಸ್ವಿಯಾಗಿದ್ದಾರೆ.
ಗಾಯಗೊಂಡ ಆಕಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಕಾರ್ಯಾಚರಣೆ ಸಾಯಂಕಾಲ 07.30 ರ ವರೆಗೆ ನಡೆಸಿದ್ದು ಸ್ವಯಂಸೇವಕರ ಸೇವೆಗೆ ಸಿದ್ದವನ ಆಡಳಿತ ಶ್ಲಾಘನೆ ವ್ಯಕ್ತಪಡಿಸಿದೆ..
ಕಾರ್ಯಾಚರಣೆಯಲ್ಲಿ ಸಿದ್ದವನದ ಸಿಬ್ಬಂದಿ, ಸ್ಥಳೀಯರು ಇದ್ದರು. ವಿಪತ್ತು ನಿರ್ವಹಣಾ ಯೋಜನಾಧಿಕಾರಿ ಜೈವಂತ ಪಟಗಾರ್ ಉಪಸ್ಥಿತರಿದ್ದರು.
ವರದಿ:
ವಿ.ನಿ.ವಿಭಾಗ
Comments
Post a Comment