ಬೆಳ್ತಂಗಡಿ: ವ್ಯಕ್ತಿ ನಾಪತ್ತೆ, ಶವವಾಗಿ ನದಿಯಲ್ಲಿ ಪತ್ತೆ, ಕಾರ್ಯಾಚರಣೆ ನಡೆಸಿದ ಸ್ವಯಂಸೇವಕರು.
ಬೆಳ್ತಂಗಡಿ ತಾಲೂಕಿನ ಪಟ್ರಮೆಯಲ್ಲಿ ವ್ಯಕ್ತಿಯೋರ್ವ ಕಳೆದ ಮೂರು ದಿನದಿಂದ ಕಣ್ಮರೆಯಾಗಿದ್ದು ಇಂದು ನದಿಯಲ್ಲಿ ಶವವಾಗಿ ಪತ್ತೆಯಾದ ಘಟನೆ ನಡೆದಿದೆ. ಅಳದಂಗಡಿ ಮೂಲದ ವ್ಯಕ್ತಿಯಾಗಿದ್ದು ಪ್ರಕರಣ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.
ಇಂದು ಬೆಳಿಗ್ಗೆ ವ್ಯಕ್ತಿಯ ಶವ ಪತ್ತೆಯಾದ ಹಿನ್ನಲೆಯಲ್ಲಿ ಪೊಲೀಸರು ಶವ ತೆಗೆದುಕೊಡುವಂತೆ ಶೌರ್ಯ ವಿಪತ್ತು ನಿರ್ವಹಣಾ ಘಟಕ ಉಜಿರೆ ಬೆಳಾಲು ಘಟಕಕ್ಕೆ ಮನವಿ ಮಾಡಿಕೊಂಡ ಹಿನ್ನಲೆಯಲ್ಲಿ ಕ್ಯಾಪ್ಟನ್ ಸಂತೋಷ್, ಘಟಕ ಪ್ರತಿನಿಧಿ ರವೀಂದ್ರ, ಶಶಿಕುಮಾರ್ ಸ್ಥಳಕ್ಕೆ ತೆರಳಿ ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ.
ಪೊಲೀಸರು ಮತ್ತು ಗ್ರಾಮಸ್ಥರು ಶೌರ್ಯ ಸ್ವಯಂಸೇವಕರ ಸೇವೆಗೆ ಮೆಚ್ಚುಗೆ ಸೂಚಿಸಿದ್ದಾರೆ.
Comments
Post a Comment