ಬೆಳ್ತಂಗಡಿ: ಅಪರಿಚಿತ ಶವ ಪತ್ತೆ ಕಾರ್ಯಾಚರಣೆ; ಉಜಿರೆ ಬೆಳಾಲು ಸ್ವಯಂಸೇವಕರಿಂದ ಸಾಹಸ.

ಉಜಿರೆ, ಫೆಬ್ರುವರಿ 13, 2024: ಇಂದು ಮಧ್ಯಾಹ್ನ ಉಜಿರೆ ಬಳಿಯ ಫಜಿರಡ್ಕ ದೇವಸ್ಥಾನದ ಬಳಿಯ ನದಿಯಲ್ಲಿ ವ್ಯಕ್ತಿಯೊಬ್ಬನ ಮೃತದೇಹ ತೇಲುತ್ತಿದ್ದು ಗಮನಿಸಿದ ಸ್ಥಳೀಯರು ಧರ್ಮಸ್ಥಳ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು.

ಶವ ಮೇಲೆತ್ತುವ ಕಾರ್ಯಾಚರಣೆ ನಡೆಸುವಂತೆ ಧರ್ಮಸ್ಥಳ ಠಾಣೆಯ ಪೊಲೀಸ್ ಅಧಿಕಾರಿಗಳು ಶೌರ್ಯ ವಿಪತ್ತು ನಿರ್ವಹಣಾ ತಂಡಕ್ಕೆ ಮಾಹಿತಿ ನೀಡಿದ ಹಿನ್ನಲೆಯಲ್ಲಿ ಸ್ಥಳಕ್ಕೆ ತೆರಳಿದ ಉಜಿರೆ ಬೆಳಾಲು ಶೌರ್ಯ ಘಟಕದ ಸ್ವಯಂಸೇವಕರು ಕಾರ್ಯಾಚರಣೆ ನಡೆಸಿ ಮೃತ ದೇಹವನ್ನು ಮೇಲೆತ್ತಿದ್ದಾರೆ.
ಆಂಬುಲೆನ್ಸ್ ಮೂಲಕ ಮಂಗಳೂರಿನ ಕೆ. ಎಸ್.ಆಸ್ಪತ್ರೆಗೆ ಮೃತ ದೇಹವನ್ನು ಮುಂದಿನ ಕಾನೂನು ಪ್ರಕ್ರಿಯೆಗೆ ಕಳಿಸಿಕೊಡಲಾಗಿದೆ.
    
ಸಂಯೋಜಕ ಸುಲೈಮಾನ್ ಬೆಳಾಲು, ರವೀಂದ್ರ ಉಜಿರೆ, ಸಂತೋಷ ಮಾಚಾರ್, ಸುಧೀರ್ ಉಜಿರೆ, ರಾಘವೇಂದ್ರ ಉಜಿರೆ ಹಾಗೂ ಧನ್ವಿ ಆಂಬುಲೆನ್ಸ್ ನ ಧಣೇಶ್ ಇದ್ದರು.

ಧರ್ಮಸ್ಥಳ ಠಾಣೆಯ ಎಸ್. ಐ. ಸಮರ್ಥ್ ಹಾಗೂ ಪೊಲೀಸರ ತಂಡ ಹಾಜರಿದ್ದು, ಮಹಜರು ಹಾಗೂ ಕಾನೂನು ಪ್ರಕ್ರಿಯೆಗಳನ್ನು ಪೂರ್ತಿ ಮಾಡಿ ದೇಹವನ್ನು ಮಂಗಳೂರಿನ ಆಸ್ಪತ್ರೆಗೆ ರವಾನಿಸಿದರು.

ವರದಿ:
ಸುಲೈಮಾನ್
ಸಂಯೋಜಕರು

Comments