ಮೂಡಿಗೆರೆ: ಆಕಸ್ಮಿಕವಾಗಿ ಕೆರೆಯಲ್ಲಿ ಮುಳುಗಿ ಸಾವು; ಶೌರ್ಯ ತಂಡದಿಂದ ಕಾರ್ಯಾಚರಣೆ.

ಮೂಡಿಗೆರೆ, ಎಪ್ರಿಲ್ 29: ತಾಲೂಕಿನ ಗೋಣಿಬೀಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರವಾಸಕ್ಕೆಂದು ಹಾವೇರಿ ಮೂಲದ ಯುವಕ ನೋರ್ವ ಸ್ನೇಹಿತರೊಡನೆ ಕಾಫಿತೋಟದ ಹೋಂ ಸ್ಟೇ ವೊಂದಕ್ಕೆ ಬಂದಿದ್ದ ಯುವಕ ಸ್ನಾನ ಮಾಡಲೆಂದು ತೋಟದ ಕೆರೆಯಲ್ಲಿ ಮುಳುಗಿದ್ದು, ಕೆರೆಯ ಆಳದ ಅರಿವಿಲ್ಲದೆ ಗುಂಡಿಗೆ ಇಳಿದಿದ್ದು ಗುಂಡಿಯಿಂದ ಮೇಲೆ ಬರಲಾರದೆ ನಾಪತ್ತೆಯಾಗಿದ್ದು ಸಹೋದರ ಹಾಗೂ ಸ್ನೇಹಿತರು ಕೆರೆಯಲ್ಲಿ ಯುವಕನಿಗಾಗಿ ಹುಡುಕಿದರೂ ಸುಳಿವು ಸಿಕ್ಕಿರಲಿಲ್ಲ. 
ನಂತರ ಬಣಕಲ್ ಶೌರ್ಯ ವಿಪತ್ತು ಘಟಕದ ಸ್ವಯಂಸೇವಕ ಆರಿಫ್ ಮತ್ತು ಗೋಣಿಬೀಡು ಪೋಲಿಸ್ ಸಿಬ್ಬಂದಿ ಹಾಗೂ ಗೋಣಿ ಬೀಡು ಶೌರ್ಯ ಘಟಕದ ಸ್ವಯಂ ಸೇವಕರು ಮತ್ತು ಅಗ್ನಿಶಾಮಕದಳದ ಸಿಬ್ಬಂದಿ ಭಾನುವಾರ ರಾತ್ರಿಯವರೆಗೂ ಹುಡುಕಿದರೂ ಯುವಕನ ಮೃತದೇಹ ಪತ್ತೆಯಾಗಿರಲಿಲ್ಲ. ಸೋಮವಾರ ಬೆಳಗ್ಗೆ ಮಂಗಳೂರು ಮೂಲದ ಮುಳುಗು ತಜ್ಞ ಈಶ್ವರ ಮಲ್ಪೆ ಮತ್ತು ಬಣಕಲ್ ಶೌರ್ಯ ಘಟಕದ ಸ್ವಯಂಸೇವಕ ಆರಿಫ್ ಸೇರಿ ಯುವಕನ ಶವಕ್ಕಾಗಿ ಹುಡುಕಾಡಿ ಕೆಲ ಹೊತ್ತಿನಲ್ಲಿಯೇ ಮೃತದೇಹ ಪತ್ತೆಯಾಯಿತು.
        ಈ ಘಟನೆ ಗೋಣಿಬೀಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮೂಡಿಗೆರೆ ಎಂ ಜಿ ಎಮ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತ ದೇಹವನ್ನು ಪೋಷಕರಿಗೆ ಹಸ್ತಾಂತರಿಸಲು ಆರೀಫ್ ರವರು ಸಹಕಾರ ನೀಡಿರುತ್ತಾರೆ.

ವರದಿ✍️
ರವಿ ಎಸ್ಎನ್
ಶೌರ್ಯ ಘಟಕ ಬಣಕಲ್.

Comments