ಬೆಳ್ತಂಗಡಿ: ಕೆರೆಯಲ್ಲಿ ಕಾಡುಕೋಣ ಮೃತ ದೇಹ ಪತ್ತೆ, ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಶೌರ್ಯ ಸ್ವಯಂಸೇವಕರು.
ಬೆಳ್ತಂಗಡಿ: ದಿನಾಂಕ 22/04/2024 ರಂದು ಬೆಳಾಲು ಕೊಯ್ಯೂರು ಗ್ರಾಮದ ಗಡಿಭಾಗದ ಬದ್ಯಾರು ಎಂಬಲ್ಲಿ ತೋಟದ ಕೆರೆಗೆ ನೀರು ಕುಡಿಯಲು ಬಂದಿದ್ದ ದೊಡ್ಡ ಗಾತ್ರದ ಕಾಡುಕೊಣವೊಂದು ರಿಂಗ್ ಅಳವಡಿಸಿದ್ದ ಕೆರೆಗೆ ಉರುಳಿ ಬಿದ್ದು ಸಾವನ್ನಪ್ಪಿತ್ತು.
ಅರಣ್ಯ ಇಲಾಖೆಯ ಅಧಿಕಾರಿಗಳು ಉಜಿರೆ ಬೆಳಾಲು ಶೌರ್ಯ ಘಟಕಕ್ಕೆ ಮಾಹಿತಿ ನೀಡಿ ಸಹಕರಿಸುವಂತೆ ಕೇಳಿದ್ದರು.
ಇಂದು ಬೆಳಿಗ್ಗೆ ಆಳವಾದ ರಿಂಗ್ ಅಳವಡಿಸಿದ್ದ ಬಾವಿಯಿಂದ ಕಾಡುಕೋಣದ ದೇಹವನ್ನು ಮೇಲೆತ್ತುವ ಅತೀ ಕ್ಲಿಷ್ಟಕರವಾದ ಕಾರ್ಯಾಚರಣೆ ನಡೆಸಲಾಯಿತು.
ನಾಲ್ಕೈದು ಉದ್ದವಾದ ಹಗ್ಗಗಳನ್ನು ಬಳಸಿಕೊಂಡು ಸುಮಾರು ಐದಾರು ಗಂಟೆಗಳ ಕಾಲ ಶೌರ್ಯ ಸ್ವಯಂ ಸೇವಕರು ಮತ್ತು ಊರಿನ ಕೆಲವರು ಅರಣ್ಯ ಇಲಾಖೆಯವರ ಮೇಲುಸ್ತುವಾರಿಯಲ್ಲಿ ತುಂಬಾ ಕಷ್ಟ ಪಟ್ಟು ಮೇಲೆ ಎಳೆದು ಬಳಿಕ ಪಕ್ಕದಲ್ಲಿ ದಫನ ಮಾಡಲಾಯಿತು.
ಉಜಿರೆ ಬೆಳಾಲು ಘಟಕದ ಸಂಯೋಜಕ ಸುಲೈಮಾನ್ ಬೆಳಾಲು, ಹರೀಶ ಕೂಡಿಗೆ, ಶರೀಫ್ ಬೆಳಾಲು, ಸ್ನೇಕ್ ಅನಿಲ್ ಚಾರ್ಮಾಡಿ, ರವೀಂದ್ರ ಉಜಿರೆ, ಸುರೇಂದ್ರ ಉಜಿರೆ ಹಾಗೂ ಅವಿನಾಶ್ ಭಿಡೆ ಅರಶಿನಮಕ್ಕಿ, ನಳಿನ್ ಧರ್ಮಸ್ಥಳ ಮತ್ತು ತಾಲೂಕು ಶೌರ್ಯ ಮಾಸ್ಟರ್ ಸ್ನೇಕ್ ಪ್ರಕಾಶ್ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.
ಅರಣ್ಯ ಇಲಾಖೆಯ ಕೊಯ್ಯೂರು ಫಾರೆಸ್ಟರ್ ಭರತ್, ಗಾರ್ಡ್ ಪ್ರತಾಪ್, ಬಂದಾರುವಿನ ಜಗದೀಶ್, ಬೆಳಾಲು ಅರಣ್ಯ ವೀಕ್ಷಕ ಸಂತೋಷ ಮುಂತಾದವರು ಉಸ್ತುವಾರಿ ವಹಿಸಿದ್ದು ಊರಿನ ಹಲವಾರು ಜನರು ಸಹಕರಿಸಿದರು.
ವರದಿ. ಸುಲೈಮಾನ್ ಬೆಳಾಲು, ಸಂಯೋಜಕರು, ಉಜಿರೆ ಬೆಳಾಲು ಶೌರ್ಯ ಘಟಕ.
Comments
Post a Comment