ರಾಜ್ಯ ಮಟ್ಟದಲ್ಲಿ ಸೇವೆಯಲ್ಲಿ ಅತ್ಯುನ್ನತ 25 ಸಾಧಕ ಘಟಕಗಳ ಪಟ್ಟಿ ಪ್ರಕಟ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಪ್ರಾಯೋಜಿತ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಕಾರ್ಯಕ್ರಮದ ಅಡಿಯಲ್ಲಿ ರಾಜ್ಯದ 91 ತಾಲ್ಲೂಕುಗಳಲ್ಲಿನ ವಿಪತ್ತು ನಿರ್ವಹಣಾ ಸಮಿತಿಗಳಲ್ಲಿ 455 ಘಟಕಗಳನ್ನು ರಚಿಸಲಾಗಿದ್ದು ಎಲ್ಲಾ ಘಟಕಗಳು ಸಾಮಾಜಿಕ ಹಾಗೂ ವಿಪತ್ತು ನಿರ್ವಹಣಾ ಸೇವೆಗಳನ್ನು ಸಲ್ಲಿಸುತ್ತಾ ಬಂದಿವೆ. ಅತಿ ಹೆಚ್ಚು ಸೇವೆ ಸಲ್ಲಿಸಿದ ರಾಜ್ಯದ 25 ಘಟಕಗಳ ಪಟ್ಟಿ ತಯಾರಿಸಲಾಗಿದ್ದು ಕಳಸ ತಾಲ್ಲೂಕಿನ ಖಾಂಡ್ಯ ವಿಪತ್ತು ನಿರ್ವಹಣಾ ಘಟಕ ರಾಜ್ಯದಲ್ಲಿಯೇ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಮಡಿಕೇರಿಯ ನಾಪೋಕ್ಲು ಘಟಕ ಹಾಗೂ ಪುತ್ತೂರಿನ ಬಲ್ನಾಡು ಘಟಕ ಎರಡನೇ ಸ್ಥಾನ ಪಡೆದಿದೆ. ಮೂಡಿಗೆರೆ ತಾಲ್ಲೂಕಿನ ಕಸಬಾ ಘಟಕ ಮೂರನೇ ಸ್ಥಾನವನ್ನು ಪಡೆದಿದೆ.
ಸಂಯೋಜಕರು ತಮ್ಮ ಘಟಕದ ಸ್ವಯಂಸೇವಕರು ಸಲ್ಲಿಸಿದ ಸೇವೆಗಳ ಬಗ್ಗೆ ಮಾಸಿಕವಾಗಿ ವರದಿ ನೀಡುತ್ತಿದ್ದು ಇದರ ಆಧಾರದಲ್ಲಿ ಶ್ರೇಣಿಯನ್ನು ಹಂಚಿಕೆ ಮಾಡಲಾಗುತ್ತದೆ. ಸಾಮಾಜಿಕ ಸೇವೆಗಳು ಹಾಗೂ ವಿಪತ್ತು ನಿರ್ವಹಣಾ ಸೇವೆಗಳಲ್ಲಿ ರಾಜ್ಯದಲ್ಲಿ ಮೊದಲ 25 ಶ್ರೇಣಿಯನ್ನು ಪಡೆದ ಘಟಕಗಳ ವಿವರ ಈ ಕೆಳಗಿನಂತಿದೆ. ಅತ್ಯುತ್ತಮ ಸ್ಥಾನವನ್ನು ಪಡೆದ ಘಟಕಗಳ ಸಂಯೋಜಕರು, ಘಟಕ ಪ್ರತಿನಿಧಿಗಳು, ಮೇಲ್ವಿಚಾರಕರಿಗೆ ಜನಜಾಗೃತಿ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಶ್ರೀ ವಿವೇಕ್. ವಿ.ಪಾಯ್ಸ್ ರವರು ಅಭಿನಂದನೆ ಸಲ್ಲಿಸಿದ್ದಾರೆ.
“ಶೌರ್ಯ”
Comments
Post a Comment