ಉಜಿರೆಯಲ್ಲಿ 2 ನೇ ಶೌರ್ಯ ಘಟಕ ರಚನೆ..


ಬೆಳ್ತಂಗಡಿ, ಜುಲೈ 12: ಶೌರ್ಯ ವಿಪತ್ತು ನಿರ್ವಹಣಾ ಕಾರ್ಯಕ್ರಮದಲ್ಲಿ ವಿಶೇಷ ಹೆಸರು ಗಳಿಸಿದ ಉಜಿರೆ ಬೆಳಾಲು ಘಟಕದ ಸ್ವಯಂಸೇವಕರ ಸೇವಾ ಚಟುವಟಿಕೆಗಳನ್ನು ಪ್ರೇರಣೆಯಾಗಿಟ್ಟುಕೊಂಡು ಉಜಿರೆ, ಮಾಚಾರು, ನೀರಚಿಲುಮೆ ಭಾಗದ ಕೆಲವು ಯುವಕ, ಯುವತಿಯರು ಶೌರ್ಯ ಘಟಕ ರಚನೆಗೆ ಮುಂದಾಗಿದ್ದಾರೆ.  

ಈ ಪ್ರಯುಕ್ತ ಇಂದು ಉಜಿರೆಯ ಜನಾರ್ದನ ಸ್ವಾಮಿ ದೇವಸ್ಥಾನದ ಆವರಣದಲ್ಲಿ ವಲಯದ 2 ನೇ ಘಟಕ ರಚನೆಯ ಸಮಾಲೋಚನೆ ಸಭೆ ನಡೆಯಿತು. 
10 ಮಂದಿ ಹೊಸದಾಗಿ ಶೌರ್ಯ ಘಟಕಕ್ಕೆ ಸೇರ್ಪಡೆಯಾಗಲು ಸ್ವಯಂಪ್ರೇರಣೆಯಿಂದ ಮುಂದೆ ಬಂದಿದ್ದು ನೂತನ ಘಟಕ ರಚನೆಗೆ ತೀರ್ಮಾನ ಕೈಗೊಳ್ಳಲಾಯಿತು.

ಘಟಕಕ್ಕೆ ಉಜಿರೆ- ಬೆಳಾಲು- ಬಿ ಘಟಕ ಎಂದು ಹೆಸರು ಇಡಲಾಗಿದೆ. ಸಂಯೋಜಕರಾಗಿ ಶ್ರೀಮತಿ ಪ್ರಮೀಳಾ ಇವರನ್ನು ಹಾಗೂ ಘಟಕ ಪ್ರತಿನಿಧಿಯಾಗಿ ಶ್ರೀಮತಿ ಶೀಲಾವತಿ ಎಮ್. ಕೆ. ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ವಲಯ ಮೇಲ್ವಿಚಾರಕರಾದ ಶ್ರೀಮತಿ ವನಿತಾ ರವರು ಸ್ವಯಂಸೇವಕರ ಆಯ್ಕೆ ಮತ್ತು ಘಟಕ ರಚನೆಗೆ ಅಗತ್ಯ ಸಿದ್ದತೆ ನಡೆಸಿ ಸ್ವಯಂಸೇವಕರಿಗೆ ಮಾರ್ಗದರ್ಶನ ನೀಡಿದ್ದರು. 

ಕ್ಯಾಪ್ಟನ್ ಸಂತೋಷ್, ಉಜಿರೆ ಬೆಳಾಲು ಘಟಕದ ಸಂಯೋಜಕರು, ಘಟಕ ಪ್ರತಿನಿಧಿಗಳು ಹಾಗೂ ಸ್ವಯಂಸೇವಕರು, ವಲಯ ಮೇಲ್ವಿಚಾರಕರು, ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.

ವರದಿ:

ವಿಪತ್ತು ನಿರ್ವಹಣಾ ವಿಭಾಗ..

Comments