ಉಜಿರೆಯಲ್ಲಿ ಗುಡ್ಡ ಕುಸಿತ, 30 ಕ್ಕೂ ಅಧಿಕ ಬೈಕ್ ಜಖಂ, ಶೌರ್ಯ ಸ್ವಯಂಸೇವಕರು ಸ್ಥಳದಲ್ಲಿ ಸಜ್ಜು

ಉಜಿರೆ, ಜುಲೈ 30: ಇಂದು ಎರಡು ಗಂಟೆಯ ವೇಳೆಗೆ ಉಜಿರೆ ಎಸ್.ಡಿ.ಎಮ್ ಆಸ್ಪತ್ರೆ ಆವರಣ ಪಕ್ಕದಲ್ಲಿ ಇರುವ ಗುಡ್ಡ ಕುಸಿದಿದ್ದು ಆಸ್ಪತ್ರೆ ಸಿಬ್ಬಂದಿ ಗಳು ಮತ್ತು ಆಸ್ಪತ್ರೆಗೆ ಬಂದಿದ್ದ ಕೆಲವರ 30 ಕ್ಕೂ ಅಧಿಕ ಭೈಕ್ ಗಳು ಅಡಿಯಲ್ಲಿ ಸಿಲುಕಿ ಜಖಂ ಗೊಂಡಿದೆ.
ಗುಡ್ಡ ಜರಿದ ಸ್ಥಳದಲ್ಲಿ ಮನೆ ಇದ್ದು ಅಪಾಯ ಸಾಧ್ಯತೆ ಇದ್ದು ಆತಂಕವಿದೆ. 
ಪರಿಸ್ಥಿತಿ ನಿಭಾಯಿಸಲು ಶೌರ್ಯ ತಂಡ ಸ್ಥಳಕ್ಕೆ ಧಾವಿಸಿದೆ. ಜನಜಾಗೃತಿ ಪ್ರಾದೇಶಿಕ ನಿರ್ದೇಶಕರಾದ ಶ್ರೀ ವಿವೇಕ್ ವಿ. ಪಾಯ್ಸ್ ರವರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ಅವಲೋಕಿಸಿರುತ್ತಾರೆ.

Comments