ಬುಡ ಸಮೇತ ಧರೆಗುರುಳಿದ ಬೃಹತ್ ಅಶ್ವತ್ಥ ಮರ; ತುರ್ತು ಸ್ಪಂದನಾ ತಂಡದಿಂದ ತೆರವು.

ಬೆಳ್ತಂಗಡಿ, ಜುಲೈ 09: ಬಾರಿ ಮಳೆಗೆ ಪಜಿರಡ್ಕ ಗ್ರಾಮದ ಶ್ರೀ ಸದಾಶಿವೇಶ್ವರ ದೇವಸ್ಥಾನ ಇಲ್ಲಿಯ ಆವರಣದಲ್ಲಿರುವ ಬೃಹತ್ ಗಾತ್ರದ ಅಶ್ವತ ಮರ ಬೇರು ಸಹಿತ ಬಿದ್ದ ಘಟನೆ ನಡೆದಿದೆ.

ದೇವಸ್ಥಾನದ ಸಮಿತಿಯ ಪಾಂಡುರಂಗ ಕಾಕತ್ಕರ್ ಇವರು ಶೌರ್ಯ ವಿಪತ್ತು ನಿರ್ವಹಣಾ ಘಟಕಕ್ಕೆ ಮರ ತೆರವುಗೊಳಿಸಲು ಮನವಿ ಮಾಡಿದ ಹಿನ್ನೆಲೆಯಲ್ಲಿ ವಲಯ ಮೇಲ್ವಿಚಾರಕರಾದ ಶ್ರೀಮತಿ ವನಿತಾ ಇವರ  ನಿರ್ದೇಶನದಂತೆ ತುರ್ತು ಸ್ಪಂದನಾ ಘಟಕದ ಸ್ವಯಂಸೇವಕರು ಮರ ತೆರವುಗೊಳಿಸಿದ್ದಾರೆ.
ಮರ ಬೆಳವಣಿಗೆಯ ಹಂತದಲ್ಲಿ ಇರುವುದರಿಂದ ಮರದ ಗೆಲ್ಲುಗಳನ್ನು ತೆರವುಗೊಳಿಸಿದ ಸ್ವಯಂಸೇವಕರು ಮರವನ್ನು ಪುನಃ ನಿಲ್ಲಿಸಿ ಬೆಳೆದು ನಿಲ್ಲಲು ಆಸ್ಪದ ಮಾಡಿಕೊಟ್ಟಿದ್ದಾರೆ.

 ದೇವಸ್ಥಾನದ ಅರ್ಚಕರಾದ ರಾಜೇಶ್ ಭಟ್ ಅವರು ವಿಧಿ ವಿಧಾನಗಳನ್ನು ನೆರವೇರಿಸಿದ ನಂತರ ಕಾರ್ಯಾಚರಣೆ ಯನ್ನು ನಡೆಸಲಾಯಿತು. 
ಶೌರ್ಯ ಘಟಕದ ರವೀಂದ್ರ, ಸಂದೇಶ್,  ಸಂತೋಷ್, ಶಿವಕುಮಾರ್, ರಾಘವೇಂದ್ರ, ಅನಿಲ್, ಸುಧೀರ್, ಸಚಿನ್ ಬೀಡೆ, ಅವಿನಾಶ್ ಬಿಡೆ, ರಮೇಶ್ ಬೈರಕಟ್ಟ, ಕಿರಣ್ ಮತ್ತು ನಡಕನ್ಯಾಡಿ ಜಯರಾಮ್ ಭಾಗವಹಿಸಿದ್ದರು.

ಸ್ಥಳೀಯರಾದ ಕೃಷ್ಣಪ್ಪ ಗುಡಿಗಾರ್, ಪಾಂಡುರಂಗ ಕಾಕತ್ಕರ್, ಅರ್ಚಕರು, ಮತ್ತು ಊರಿನ ಗಣ್ಯರು ಭಾಗವಹಿಸಿದರು. 
ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕ ಉಜಿರೆ-ಬೆಳಾಲು, ನಡ- ಕನ್ಯಾಡಿ ಮತ್ತು ಅರಸಿನ ಮಕ್ಕಿ ಘಟಕದ ಸ್ವಯಂಸೇವಕರು ಇದ್ದರು.

ವರದಿ..
ಶೌರ್ಯ ವಿಪತ್ತು ನಿರ್ವಹಣಾ ವಿಭಾಗ

Comments