ಧಾರಾಕಾರ ಮಳೆ, ಉರುಳಿದ ಮನೆ ಪುನರ್ ನಿರ್ಮಿಸಿದ ಶೌರ್ಯರು.
ಬೆಳ್ತಂಗಡಿ, ಜುಲೈ 09: ಅರಸಿನಮಕ್ಕಿಯ ಶಿಬರಾಜೆ ಎಂಬಲ್ಲಿ
ಬಡ ಕುಟುಂಬದ ಮನೆಯೊಂದು ಧಾರಾಕಾರ ಮಳೆಯಿಂದಾಗಿ ಮನೆ ಸಂಪೂರ್ಣವಾಗಿ ಬಿದ್ದು ಹೋದ ಘಟನೆ ನಡೆದಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಸ್ವಯಂಸೇವಕರು ಕುಟುಂಬಕ್ಕೆ ವಾಸ್ತವ್ಯಕ್ಕೆ ವ್ಯವಸ್ಥೆ ಇಲ್ಲದೆ ಇರುವುದನ್ನು ಕಂಡು ತಾತ್ಕಾಲಿಕ ಮನೆ ನಿರ್ಮಾಣ ಮಾಡಲು ತೀರ್ಮಾನಿಸಿ ವಲಯ ಮೇಲ್ವಿಚಾರಕರ ಸಲಹೆಯಂತೆ ಸ್ವಯಂಸೇವಕರು ಮನೆ ರಚನೆ ಕೆಲಸ ಆರಂಭಿಸಿ ಕುಸಿದ ಮನೆಯ ವಸ್ತುಗಳನ್ನು ಸುರಕ್ಷಿತವಾಗಿ ಸಾಗಿಸಿ ಸ್ಥಳೀಯರ ಸಹಕಾರದಿಂದ ಸಿಮೆಂಟ್ ಶೀಟ್ ಹೊದಿಕೆಯ ಮನೆ ನಿರ್ಮಾಣ ಮಾಡಿಕೊಟ್ಟಿದ್ದಾರೆ.
ಶಿಶಿಲ ಅರಸಿನಮಕ್ಕಿ ಶೌರ್ಯ ವಿಪತ್ತು ನಿರ್ವಹಣಾ ಘಟಕದ 12 ಸ್ವಯಂಸೇವಕರು ಶ್ರಮದಾನ ನಡೆಸಿದರು.ಉಜಿರೆ ಘಟಕದ ಸಚಿನ್ ಶ್ರಮದಾನದಲ್ಲಿ ಇದ್ದರು.
ಶೌರ್ಯ ಸ್ವಯಂಸೇವಕರ ಸೇವೆ ಸರ್ವರ ಮೆಚ್ಚುಗೆಗೆ ಪಾತ್ರವಾಗಿದೆ.
ವರದಿ:
ಶೌರ್ಯ ವಿಪತ್ತು ನಿರ್ವಹಣಾ ವಿಭಾಗ.
Comments
Post a Comment