ಉಜಿರೆಯಲ್ಲಿ ನೂತನ 'ಶೌರ್ಯ' ತಂಡದ ಉದ್ಘಾಟನೆ.
ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದಲ್ಲಿ ನೂತನ ಶೌರ್ಯ ತಂಡ ರಚನೆ ಮಾಡಲಾಗಿದೆ. ಈಗಾಗಲೇ ಉಜಿರೆ ವಲಯದಲ್ಲಿ ಒಂದು ಶೌರ್ಯ ತಂಡ ಇದ್ದು 15 ಸ್ವಯಂಸೇವಕರಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಈ ತಂಡವು ರಾಜ್ಯದ ಗಮನ ಸೆಳೆಯುವಂತೆ ವಿಪತ್ತು ನಿರ್ವಹಣಾ ಚಟುವಟಿಕೆಗಳನ್ನು ನಡೆಸಿಕೊಂಡು ಬಂದಿದ್ದು ಸೇವಾ ಚಟುವಟಿಕೆಗಳನ್ನು ಗಮನಿಸಿದ ಉಜಿರೆ ವಲಯದ 15 ಯುವಕರು ಸ್ವಯಂ ಪ್ರೇರಣೆಯಿಂದ ನೂತನ ತಂಡವನ್ನು ರಚಿಸಿದ್ದಾರೆ.
ಹೊಸದಾಗಿ ರಚನೆಗೊಂಡ ತಂಡವನ್ನು ಜನಜಾಗೃತಿ ಪ್ರಾದೇಶಿಕ ನಿರ್ದೇಶಕರಾದ ಶ್ರೀ ವಿವೇಕ್ ವಿ. ಪಾಯ್ಸ್ ರವರು ಉದ್ಘಾಟನೆ ಮಾಡಿ, ಶೌರ್ಯ ತಂಡದ ಸದಸ್ಯರು ಮಾಡಿದ ಸಾಧನೆಯ ಬಗ್ಗೆ, ವಿಪತ್ತು ನಿರ್ವಹಣಾ ಚಟುವಟಿಕೆಗಳ ಬಗ್ಗೆ, ಸಮಾಜದಲ್ಲಿ ಘಟಿಸಬಹುದಾದ ವಿಪತ್ತು ಗಳು ಮತ್ತು ಅವುಗಳಿಗೆ ಸ್ಪಂದನೆಯ ಬಗ್ಗೆ ಮಾಹಿತಿ ನೀಡಿದರು.
ಘಟಕದ ಸ್ವಯಂಸೇವಕರಿಗೆ ಸಮವಸ್ತ್ರ, ನಿರ್ಣಯ ಪುಸ್ತಕ, ಘಟಕದ ಸಂಯೋಜಕರಿಗೆ ಹಾಗೂ ಘಟಕದ ಪ್ರತಿನಿಧಿಗಳಿಗೆ ಶೌರ್ಯ ಕ್ಯಾಪ್ ನೀಡಿ, ನೂತನ ಸೇರ್ಪಡೆ ಸ್ವಯಂಸೇವಕರಿಗೆ ಮಂಜುನಾಥ ಸ್ವಾಮಿಯ ಫೋಟೋ ನೀಡಿ ತಂಡಕ್ಕೆ ಶುಭ ಹಾರೈಸಿದರು.
ಬೆಳ್ತಂಗಡಿ ತಾಲೂಕಿನ ಯೋಜನಾಧಿಕಾರಿ ಶ್ರೀ ಸುರೇಂದ್ರ ಕುಮಾರ್, ವಿಪತ್ತು ನಿರ್ವಹಣಾ ಯೋಜನಾಧಿಕಾರಿ ಶ್ರೀ ಜೈವಂತ ಪಟಗಾರ್, ಮೇಲ್ವಿಚಾರಕರಾದ ಶ್ರೀಮತಿ ವನಿತಾ, ಸಂಯೋಜಕರು, ಘಟಕ ಪ್ರತಿನಿಧಿ, 14 ಸ್ವಯಂಸೇವಕರು ಉಪಸ್ಥಿತರಿದ್ದರು.
ವರದಿ:
ವಿಪತ್ತು ನಿರ್ವಹಣಾ ವಿಭಾಗ
Comments
Post a Comment