ಶಿರಸಿ: 'ಶೌರ್ಯ' ಸ್ವಯಂಸೇವಕರು ಯೋಧರಂತೆ ಸೇವೆ ಸಲ್ಲಿಸುತ್ತಿದ್ದಾರೆ.

ಶಿರಸಿ, ಅಕ್ಟೋಬರ್ 16: 'ಶೌರ್ಯ' ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಸಮಿತಿ ಶಿರಸಿ ಇದರ ಸ್ವಯಂಸೇವಕರಿಗೆ  ವಾರ್ಷಿಕ ತರಬೇತಿ ಕಾರ್ಯಕ್ರಮ "ಜೀವ ರಕ್ಷಣಾ ಕೌಶಲ್ಯ ತರಬೇತಿ" ನಡೆಯಿತು. 

ತರಬೇತಿಯನ್ನು ಜಿಲ್ಲಾ ನಿರ್ದೇಶಕರಾದ ಶ್ರೀ ಎ. ಬಾಬು ನಾಯ್ಕ್ ರವರು ಉದ್ಘಾಟನೆ ನಡೆಸಿ ಮಾತನಾಡಿದರು.
ಘಟಕದ ಸ್ವಯಂಸೇವಕರು ಶಿಸ್ತು, ಬದ್ದತೆ, ಸಮಯ ಪ್ರಜ್ಞೆ ರೂಢಿಸಿಕೊಂಡು ಸಮಾಜ ಸೇವೆಯಲ್ಲಿ ಮಾದರಿಯಾಗಿ ತೊಡಗಿಕೊಳ್ಳಬೇಕು. ವಿಪತ್ತು ನಿರ್ವಹಣಾ ಸೇವೆ ಮಾಡುವಾಗ ಮೊದಲು ತಮ್ಮ ರಕ್ಷಣೆಗೆ ಗಮನ ಕೊಡಬೇಕು. ಯೋಧರಂತೆ ಸಮಾಜದಲ್ಲಿ ನೆರವಿಗೆ ನಿಲ್ಲಬೇಕು ಎಂದರು.
ಉಷಾ ಫೈರ್ ಸೇಫ್ಟಿ ಕಂಪನಿಯ ತರಬೇತಿದಾರರಾದ ಶ್ರೀ ಸಂತೋಷ ಪೀಟರ್ ಡಿಸೋಜ ರವರು ತರಬೇತಿ ನೀಡಿದರು. 
ಶೌರ್ಯ ಘಟಕಗಳ 86 ಸ್ವಯಂಸೇವಕರು ತರಬೇತಿಯಲ್ಲಿ ಹಾಜರಿದ್ದು ತರಬೇತಿ ಪಡೆದಿದ್ದಾರೆ. ಶಿರಸಿ ತಾಲೂಕಿನ ಯೋಜನಾಧಿಕಾರಿ ಶ್ರೀ ರಾಘವೇಂದ್ರ ನಾಯ್ಕ್, ಮಾಸ್ಟರ್ ಶ್ರೀಮತಿ ಶಿಲ್ಪಾ ಭಾಸ್ಕರ್, ಕ್ಯಾಪ್ಟನ್ ಶ್ರೀ ರಾಜೇಶ್ ಉಪಸ್ಥಿತರಿದ್ದರು.

ವರದಿ: ವಿಪತ್ತು ನಿರ್ವಹಣಾ ವಿಭಾಗ

Comments