ಹೆಬ್ರಿ: ಗೋವಿಗಾಗಿ ಮೇವು; ಗೋಶಾಲೆಗೆ ಮೇವು ಪೂರೈಸಿದ ಸ್ವಯಂಸೇವಕರು..

ಡಿಸೆಂಬರ್ 2,2024: ಹೆಬ್ರಿ ತಾಲ್ಲೂಕಿನ ಚಾರ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು ಗೋವುಗಳ ಮೇವಿಗಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.
ಚಾರ ನವೋದಯ ವಿದ್ಯಾಲಯದ ಕ್ರೀಡಾಂಗಣದಲ್ಲಿ ಬೆಳೆದಿರುವ ಯೋಗ್ಯ ಹುಲ್ಲನ್ನು ಕಟಾವು ಮಾಡಿ, ಹೆಬ್ರಿಯ ಗಿಲ್ಲಾಳಿಯ ವಿಶ್ವೇಶಕೃಷ್ಣ ಗೋ ಶಾಲೆಗೆ ಮೇವು ಹುಲ್ಲನ್ನು ಹಸ್ತಾಂತರಿಸಿದ್ದಾರೆ. ಕಳೆದ ವರ್ಷದಿಂದ ಮೇವು ಪೂರೈಸುತ್ತಾ ಬಂದಿರುವ ಈ ತಂಡ ಇದೇ ರೀತಿಯ ಅನೇಕ ಸಾಮಾಜಿಕ ಕಳಕಳಿ ಯ ಚಟುವಟಿಕೆಗಳನ್ನು ನಡೆಸಿಕೊಂಡು ಬಂದಿದೆ.
ಸ್ವಯಂಸೇವಕರಾದ  ಗಂಗಾರತ್ನ, ಚಂದ್ರ ನಾಯ್ಕ, ಸುಬ್ರಹ್ಮಣ್ಯ, ಕುಮಾರ್ ನಾಯ್ಕ, ಸತೀಶ ನಾಯ್ಕ, ನಿಖಿತ್ ಕುಮಾರ್, ಸುರೇಂದ್ರ ನಾಯ್ಕ ಮತ್ತು ರಾಘವೇಂದ್ರ.ಎಸ್ ಇವರು ಮೇವು ಕಟಾವು ಶ್ರಮದಾನದಲ್ಲಿ ಭಾಗವಹಿಸಿದ್ದರು.
ಘಟಕ ಪ್ರತಿನಿಧಿ ಚಂದ್ರ ನಾಯ್ಕ, ಸಂಯೋಜಕಿ ಲತಾ, ವಲಯದ ಮೇಲ್ವಿಚಾರಕರಾದ ಶ್ರೀಮತಿ ರೇವತಿ, ಪ್ರವೀಣ್, ನವೋದಯದ ಸಿಬ್ಬಂದಿಗಳಾದ ನಾಗೇಶ್ ಮತ್ತು ಮಲ್ಲೇಶ್ ಉಪಸ್ಥಿತರಿದ್ದರು.
ವರದಿ:

ಜನಜಾಗೃತಿ ಪ್ರಾದೇಶಿಕ ವಿಭಾಗ

Comments