ಹೆಬ್ರಿ: ಶಾಲೆಯಲ್ಲಿ ತರಕಾರಿ ಕೈತೋಟ; ಅಜೆಕಾರು ಘಟಕದ ಸ್ವಯಂಸೇವಕರ ಸೇವೆ.

ಡಿಸೆಂಬರ್ 2, 2024:  'ಶೌರ್ಯ' ವಿಪತ್ತು ನಿರ್ವಹಣಾ ಘಟಕ ಅಜೆಕಾರು 
ಇದರ ಸ್ವಯಂಸೇವಕರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ದಾಸಗದ್ದೆ ಇಲ್ಲಿ ಶಾಲಾ ಕೈತೋಟ ನಿರ್ಮಾಣ ಮಾಡಿ ರಕ್ಷಣೆಗಾಗಿ ಬೇಲಿ ಅಳವಡಿಸಿದರು.
ಸ್ವಯಂಸೇವಕರಾದ ವಿಜಯ, ಪ್ರವೀಣ್, ರಾಜೇಶ್, ಸುಶ್ಮಿತಾ, ರೇಷ್ಮಾ, ಪ್ರದೀಪ, ಅಶೋಕ, ಲಲಿತ, ಸುಲೋಚನಾ ಇವರು ಶ್ರಮದಾನದಲ್ಲಿ ಭಾಗವಹಿಸಿದ್ದರು.
ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ದಾಸಗದ್ದೆ ಇಲ್ಲಿಯ ಶಾಲಾ ಶಿಕ್ಷಕರ ಮತ್ತು ಶಾಲಾಭಿವೃದ್ಧಿ ಸಮಿತಿಯ ಕರೆಯ ಮೇರೆಗೆ ಶೌರ್ಯ ವಿಪತ್ತು ನಿರ್ವಹಣಾ ಘಟಕದ 9 ಜನ ಸ್ವಯಂಸೇವಕರು ಶಾಲೆಗೆ ತೆರಳಿ, ಶಾಲೆಯ ತರಕಾರಿ ಕೈತೋಟದ ನಿರ್ಮಾಣ ಮಾಡಿ ಅದರ ರಕ್ಷಣೆಗೆ ತಡೆ ಬೇಲಿಯನ್ನು ರಚನೆ ಮಾಡಿದ್ದಾರೆ.
ಈ ಸಂದರ್ಭದಲ್ಲಿ,  ಶೌರ್ಯ ಘಟಕದ ಸಂಯೋಜಕಿ, ಎಸ್.ಡಿ.ಎಮ್.ಸಿ ಅಧ್ಯಕ್ಷರು, ಶಾಲಾ ಮುಖ್ಯ ಶಿಕ್ಷಕರು ಹಾಗೂ ಘಟಕದ ಸದಸ್ಯರು ಉಪಸ್ಥಿತರಿದ್ದರು.
ಶಾಲಾ ಶಿಕ್ಷಕರು ವಿಪತ್ತು ನಿರ್ವಹಣಾ ಘಟಕಕ್ಕೆ ಶುಭ ಹಾರೈಸಿದರು.

Comments