ಶಿರಸಿ: ಪೂಜ್ಯರ ಹುಟ್ಟು ಹಬ್ಬದ ನಿಮಿತ್ತ ಮಕ್ಕಳಿಗೆ ನೋಟ್ ಬುಕ್ ವಿತರಣೆ.

ಶಿರಸಿ, ನವೆಂಬರ್ 25:  ಶಿರಸಿ A ಘಟಕದ ಸ್ವಯಂಸೇವಕರು ಪೂಜ್ಯರ ಹುಟ್ಟು ಹಬ್ಬದ ನಿಮಿತ್ತ ಗಣೇಶ ನಗರದ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಸಿಹಿ ಹಂಚಿ, ನೋಟ್ ಬುಕ್, ಪೆನ್ಸಿಲ್ ವಿತರಣೆ ಮಾಡಿದರು.
ಘಟಕ ಪ್ರತಿನಿಧಿ ಶಿಲ್ಪಾ ನಾಯ್ಕ, ಸಂಯೋಜಕರು ರೋಹಿಣಿ ಕಾರಳ್ಳಿ ಸ್ವಯಂಸೇವಕರಾದ ಜಗದೀಶ್ ಗೌಡ, ಸಂತೋಷ ಕಾರಳ್ಳಿ, ಶರತ್ ಉಪಸ್ಥಿತರಿದ್ದರು.

ಅಂಗನವಾಡಿ ಕೇಂದ್ರದ ಸಹಾಯಕಿ ಸ್ವಯಂಸೇವಕರಿಗೆ ಕೃತಜ್ಞತೆ ಸಲ್ಲಿಸಿದರು.

ವರದಿ :
ರೋಹಿಣಿ ಕಾರಳ್ಳಿ 
ಸಂಯೋಜಕರು.

Comments