ಶಿರಸಿ: ಶಾಲೆಯ ಕಟ್ಟಡದ ಮೇಲೆ ಬೀಳುವ ಸ್ಥಿತಿಯಲ್ಲಿದ್ದ ಅಪಾಯಕಾರಿ ಮರವನ್ನು ತೆರವುಗೊಳಿಸಿದ ಸ್ವಯಂಸೇವಕರು.


ಡಿಸೆಂಬರ್ 03, 2024: ಹಿರಿಯ ಪ್ರಾಥಮಿಕ ಶಾಲೆ, ಕಡಬಾಳ ಇಲ್ಲಿ ಮರವೊಂದು  ಶಾಲೆಯ ಮೇಲ್ಚಾವಣಿಯ ಮೇಲೆ ಬೀಳುವ ಅಪಾಯಕಾರಿ ಸ್ಥಿತಿಯಲ್ಲಿ ಇದ್ದು ಶಾಲೆ ಯ ಶಿಕ್ಷಕರು ಮರ ತೆರವು ಗೊಳಿಸಲು ಸಹಕಾರ ಕೋರಿದ ಹಿನ್ನೆಲೆಯಲ್ಲಿ  ಹುಲೇಕಲ್ ಘಟಕದ ಸ್ವಯಂಸೇವಕರು
ಉಪ ಅರಣ್ಯ ವನಪಾಲಕರಾದ ಶ್ರೀಯುತ ವೀರಣ್ಣ ಎಲಿಗಾರ್ ಇವರ, ಅನುಮತಿ ಪಡೆದು ಮರ ತೆರವು ಕಾರ್ಯಾಚರಣೆ ನಡೆಸಿದರು.
ಮರ ಅಪಾಯಕಾರಿ ಸ್ಥಿತಿಯಲ್ಲಿ ಇದ್ದುದರಿಂದ ಶಾಲೆಯ ಮೇಲ್ಚಾವಣಿಗೆ ಯಾವುದೇ ತೊಂದರೆ ಆಗದಂತೆ ಮರ ತೆಗೆಯುವ ಸವಾಲಿನ ಕೆಲಸ ಮಾಡಬೇಕಾಗಿತ್ತು. ಘಟಕದಲ್ಲಿ ಮರ ಏರುವ ಪರಿಣಿತ ಸ್ವಯಂಸೇವಕರು ಇದ್ದುದರಿಂದ ಸ್ವಯಂಸೇವಕರು ಜಾಗೃತೆಯಿಂದ ಅರಣ್ಯ ಇಲಾಖೆಯ ಅಧಿಕಾರಿಗಳ ಮಾರ್ಗದರ್ಶನ ದಲ್ಲಿ ಮರ ತೆರವು ಮಾಡಿದ್ದಾರೆ.
ಮರ ತೆರವುಗೊಳಿಸಿದ ಸ್ವಯಂಸೇವಕರು ಶಾಲೆ ಸುತ್ತಲೂ ಸ್ವಚ್ಛತೆ ಶ್ರಮದಾನ ಮಾಡಿರುತ್ತಾರೆ. 
ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರು ಶ್ರೀ ಗುರುಮೂರ್ತಿ ಹೆಗಡೆ, ಶಾಲಾ ಮುಖ್ಯ ಅಧ್ಯಾಪಕರು ಶ್ರೀಮತಿ ಲತಾ ನಾಯ್ಕ, ಸೇವಾಪ್ರತಿನಿಧಿ ಶ್ರೀಮತಿ ಸರಸ್ವತಿ, ಶ್ರೀಮತಿ ರಾಧಾ ಉಪಸ್ಥಿತರಿದ್ದರು.
ಸಂಯೋಜಕರು ಸರಸ್ವತಿ, ಸ್ವಯಂಸೇವಕರಾದ ನರಸಿಂಹ, ಮಮತಾ, ಸಂತೋಷ, ವೆಂಕಟ್ರಮಣ, ಚಂದ್ರಶೇಖರ, ರಾಜೀವ ಶ್ರಮದಾನದಲ್ಲಿ ಭಾಗವಹಿಸಿದ್ದರು.

ವರದಿ:
ಸರಸ್ವತಿ
ಸಂಯೋಜಕರು

Comments