ಶೃಂಗೇರಿ: ಭದ್ರಾ ನದಿಯಲ್ಲಿ ಅಪರಿಚಿತ ಶವ ಪತ್ತೆ: ಪೊಲೀಸ್ ಇಲಾಖೆಯೊಂದಿಗೆ ಕಾರ್ಯಾಚರಣೆ
ಬಾಳೆಹೊನ್ನೂರು ಸಮೀಪ ಕುಡಿಗೆ ಎಂಬಲ್ಲಿ ಭದ್ರ ನದಿಯಲ್ಲಿ ಅನಾಥ ಶವ ವಿದ್ದ ಬಗ್ಗೆ ಪೊಲೀಸ್ ಇಲಾಖೆ ಯಿಂದ ಮಾಹಿತಿ ತಿಳಿಯುತ್ತಿದ್ದಂತೆ ಇಲಾಖೆಯ ಸಿಬ್ಬಂದಿ ಗಳೊಂದಿಗೆ ಸ್ಥಳಕ್ಕೆ ತೆರಳಿದ ವಿಪತ್ತು ನಿರ್ವಹಣಾ ಘಟಕ ಬಾಳೆಹೊನ್ನೂರು ಮತ್ತು ಖಾಂಡ್ಯ ಘಟಕದ ಸ್ವಯಂಸೇವಕರು ಶವ ತೆರವು ಕಾರ್ಯಾಚರಣೆ ನಡೆಸಿದರು. ಬಹಳ ಕಠಿಣ ಪರಿಸರದಲ್ಲಿ ಶವ ಇದ್ದುದರಿಂದ ರಸ್ತೆಗೆ ತರಲು ಸುಮಾರು 2 ಕಿಲೋಮೀಟರ್ ದೂರದ ವರೆಗೆ ಹೊತ್ತು ಸಾಗಿಸಬೇಕಾಗಿತ್ತು. ಸವಾಲಿನ ಕೆಲಸವಾದರೂ ಮಾನವೀಯತೆ, ಹಾಹಸ ಗುಣಗಳನ್ನು ಮೈಗೂಡಿಸಿಕೊಂಡ ಸ್ವಯಂಸೇವಕರು ಶ್ರಮದಿಂದ ಶವವನ್ನು ಎರಡು ಕಿಲೋಮೀಟರ್ ದೂರದವರೆಗೆ ಹೊತ್ತುಕೊಂಡು ಹೋಗಿ ಅಂಬುಲೆನ್ಸ ವಾಹನಕ್ಕೆ ತಲುಪಿಸಿದ್ದಾರೆ. ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರದೀಪ್, ಗಿರೀಶ್ , ಚನ್ನಕೇಶವ ಮತ್ತು ನಂದೀಶ್ ಕಾರ್ಯಾಚರಣೆಯಲ್ಲಿ ತೊಡಗಿದ್ದರು.